ಡಿಕೆಶಿ ಮೇಲೆ ಸಿಬಿಐ ದಾಳಿ: ಒಕ್ಕಲಿಗರ ಸಂಘ ಆಕ್ರೋಶ 

CBI raids

01-06-2018

ಬೆಂಗಳೂರಿನ ವಿವಿಪುರಂನ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಪದಾಧಿಕಾರಿಗಳು
ಶಾಸಕ ಡಿ.ಕೆ ಶಿವಕುಮಾರ್ ವಿರುದ್ದ ಕೇಂದ್ರ ಸರ್ಕಾರ ನಡೆಸುತ್ತಿರು ಸಿ.ಬಿ.ಐ ದಾಳಿಯನ್ನು ಖಂಡಿಸಿದರು. 

ಒಕ್ಕಲಿಗ ಸಂಘದ ಅಧ್ಯಕ್ಷ  ಬೆಟ್ಟೇಗೌಡ ಮಾತನಾಡಿ, ನಮ್ಮ ಸಮುದಾಯದ ನಿಷ್ಠಾವಂತ ನಾಯಕನ ಮೇಲೆ ವಿನಾಕಾರಣ ಸಿಬಿಐ ದಾಳಿ, ಇಡಿ ದಾಳಿ ನಡೆಸಲಾಗ್ತಿದೆ.ಕೇಂದ್ರ ಸರ್ಕಾರದಿಂದ  ನಮ್ಮ ಜನಾಂಗದ ನಾಯಕನನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಈ ಪ್ರವೃತ್ತಿ ಕೂಡಲೆ ನಿಲ್ಲಿಸಬೇಕು. ರಾಜ್ಯಾದ್ಯಂತ ನಮ್ಮ ಸಮುದಾಯ ಪ್ರತಿರೋಧ ವ್ಯಕ್ತಪಡಿಸಲಿದೆ. ನಮ್ಮ ಇಡೀ ಸಮುದಾಯ ಡಿಕೆಶಿ ಬೆಂಬಲಕ್ಕೆ ನಿಲ್ಲಲಿದೆ ಎಂದು ಬೆಟ್ಟೇಗೌಡ ತಿಳಿಸಿದರು.

ಡಿಎ ಶಿವಕುಮಾರ್ ತನಿಖೆಗೆ ಸಹಕಾರ ಕೊಟ್ಟಿದ್ರೂ ಸರ್ಚ್ ವಾರೆಂಟ್ ಹೊರಡಿಸಲಾಗಿದೆ.
ಇದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ದಾಳಿ. ನಮ್ಮ ಜನಾಂಗ ಈ ರೀತಿಯ ದಾಳಿಯನ್ನು ಖ‌ಂಡಿಸುತ್ತದೆ. ಬಿಜೆಪಿ ದುರುದ್ದೇಶದಿಂದ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ