ರಾಜ್ಯ ರಸ್ತೆ ಸಾರಿಗೆಯಿಂದ ತಂಬಾಕು ಸೇವನೆ ವಿರುದ್ಧ ಜಾಗೃತಿ

Awareness against tobacco consumption by State Road Transport

01-06-2018

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್‍ಆರ್‍ಟಿಸಿ) ಕಳೆದ ನಾಲ್ಕು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡಿದ 1,14,997 ಮಂದಿ ಪ್ರಯಾಣಿಕರಿಂದ ಸುಮಾರು 2.30ಕೋಟಿಯಷ್ಟು ದಂಡ ವಸೂಲು ಮಾಡಲಾಗಿದೆ.

ಸಂಸ್ಥೆಯ ಎಲ್ಲಾ ಬಸ್ ನಿಲ್ದಾಣಗಳು, ವಿಭಾಗೀಯ ಕಛೇರಿಗಳು, ಘಟಕಗಳು, ಕಾರ್ಯಾಗಾರಗಳು, ತರಬೇತಿ ಕೇಂದ್ರಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ 200ರ ವರೆಗೆ ದಂಡ ವಿಧಿಸಲಾಗುವುದು ಎಂಬ ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1 ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ,ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ,ಮಾರಾಟ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ.ದಂಡ ವಿಧಿಸುವುದೊಂದೇ ಪರಿಹಾರವಲ್ಲವಾದರೂ, ಸಾರ್ವಜನಿಕರು ಹಾಗೂ ನಿಗಮದ ಸಿಬ್ಬಂದಿಗಳಲ್ಲಿ ಅರಿವು ಮೂಡಿಸಲು ಇದು ಅವಶ್ಯಕವಾಗಿದೆ, ದೇಶದಲ್ಲಿ ಈವರೆಗೂ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇದವನ್ನು ಜಾರಿಗೊಳಿಸಿರುವುದಿಲ್ಲ.ಸಿಗರೇಟು ಹಾಗೂ ತಂಬಾಕಿನ ಮೇಲೆ ನೀರನ್ನು ಸುರಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ