ಎಂ.ಇ.ಎಸ್. ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ವಾಪಸ್ !

Kannada News

25-05-2017 261

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಈ.ಎಸ್. ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ. ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ಪೊಲೀಸರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದು, ಸಚಿವರು ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಮರಳಿದ್ದಾರೆ. ಕುಗನೊಳ್ಳಿ ಚೆಕ್ ಪೊಸ್ಟ್ ನಿಂದ ಸಚಿವ ದೀವಾಕರ ರಾವತ್ ವಾಪಸ್ ಮರಳಿದ್ದಾರೆ. ಇಂದಿನಿಂದ 3 ದಿನಗಳ ವರೆಗೆ ಮಹಾರಾಷ್ಟ್ರದ ಸಚಿವ ದಿವಾಕರ ರಾವತ್ ಮತ್ತು ದೀಪಕ್ ಸಾಂವತಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧಿಸಿದ ಬೆಳಗಾವಿ ಜಿಲ್ಲಾಡಳಿತ ಕ್ರಮದಿಂದ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ ಸಚಿವ ರಾವತ್. ನಿರ್ಬಂಧ ಆದೇಶ ತೊರಿಸುತ್ತಿದ್ದಂತೆ ಮರಳಿ ಕೊಲ್ಲಾಪುರಕ್ಕೆ ತೆರಳಿದ ಸಚಿವ ಮತ್ತು ಹಿಂಬಾಲಕರು .
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ