ಮಕ್ಕಳ ಕಳ್ಳನೆಂದು ಭಾವಿಸಿ ಸ್ಥಳೀಯರಿಂದ ಕೊಲೆ

kid thief

01-06-2018

ಮಕ್ಕಳ ಕಳ್ಳನೆಂದು ಭಾವಿಸಿ ಚಾಮರಾಜಪೇಟೆಯಲ್ಲಿ ಅಮಾಯಕನೊಬ್ಬನನ್ನು ಹೊಡೆದು ಸಾಯಿಸಿದ ಕೃತ್ಯ ಮಾಸುವ ಮುನ್ನವೇ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ತಮಿಳುನಾಡಿನ ಹೊಸೂರಿನ ವನ್ನಲವಾಡಿಯಲ್ಲಿ ಮಕ್ಕಳ ಕಳ್ಳ ಎಂದು ಶಂಕಿಸಿ ಉತ್ತರ ಭಾರತೀಯನೊಬ್ಬನನ್ನು ಸ್ಥಳೀಯರು ಥಳಿಸಿ ಕೊಲೆ ಮಾಡಿದ್ದಾರೆ.

ಇನ್ನು ಮೃತ ಯುವಕ ಉತ್ತರ ಭಾರತೀಯನಾಗಿದ್ದು ಹೆಸರು ವಿಳಾಸ ಪತ್ತೆಯಾಗಿಲ್ಲ. ಈತ ವನ್ನಲವಾಡಿ ಸಮೀಪ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಜೊತೆಗಾರರಿಬ್ಬರ ಜೊತೆ ಹೋಗುವಾಗ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಮೂವರನ್ನು ಶಂಕಿಸಿ ಹಿಡಿಯಲು ಮುಂದಾಗಿದ್ದಾರೆ.

ಆಗ ಇಬ್ಬರು ತಪ್ಪಿಸಿಕೊಂಡು ಓಡಿಹೋದ್ದಾರೆ.ಆದರೆ ಈತ ಮಾತ್ರ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದವನನ್ನು ಹಿಗ್ಗಾ-ಮುಗ್ಗಾ ಥಳಿಸಿ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ.ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವದಂತಿ ಹಿನ್ನೆಲೆಯಲ್ಲಿ ಅಮಾಯಕರನ್ನು ಗ್ರಾಮಸ್ಥರು ಹಿಡಿದು ಹೊಡೆಯುತ್ತಿರುವುದರಿಂದ ಹೊಸೂರು ಪೊಲೀಸರು ಇದೊಂದು ವದಂತಿ ಯಾರು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಪ್ರಚಾರ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ