ಕಾಲಾ ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ

The film is forbidden in Karnataka

01-06-2018

ರಜನೀಕಾಂತ್ ಕಾಲಾ ಚಿತ್ರ ಬಿಡುಗಡೆ ನೀಡಬೇಡಿ ಎಂದು ಕರುನಾಡ ಸೇವಕರು ಸಂಘಟನೆಯಿಂದ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದಾರೆ. ರಜನೀಕಾಂತ್ ಕರ್ನಾಟಕ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಅವರ ಅಭಿಮಾನಿಗಳು ಕಾಲಾ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಂತಹವರಿಗೆ  ಬೇಕಾದ್ರೆ ನಾವೇ ಬಸ್ ಮಾಡಿಕೊಡುತ್ತೇವೆ. ಹೋಗಿ ಹೊಸೂರಿನಲ್ಲಿ ಚಿತ್ರ ನೋಡಿಕೊಂಡು ಬರಲಿ. ಆದರೆ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಲಾ ಚಿತ್ರ ಬಿಡುಗಡೆ ಆಗಬಾರದು. ಇದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ರಮ ತೆಗೆದುಕೊಳ್ಳಬೇಕು ಎಂದು ಕರುನಾಡ ಸೇವಕರು ಸಂಘಟನೆ ಅಧ್ಯಕ್ಷ ರೂಪೇಶ್  ರಾಜಣ್ಣ ಹೇಳಿಕೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

ಕಾಲಾ ರಜನೀಕಾಂತ್ ನಿಷೇಧ ಚಿತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇವನನ್ನು ರಾಜ್ಯದಲ್ಲಿ ಬರದಂತೆ ತಡೆಯಬೇಕು.
  • ಶ್ರೀಶೈಲ
  • ನಿವ್ರತ್ತರು