ಚಾಕು ಇರಿದು ಪರಾರಿಯಾಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

Police arrested two mens

31-05-2018

ಬೆಂಗಳೂರು, ಮೇ 32-ಸಿಗರೇಟ್ ಕೊಡುವ ವಿಚಾರದ ಜಗಳದಲ್ಲಿ ಪೆಟ್ಟಿಗೆ ಅಂಗಡಿ ವ್ಯಾಪಾರಿ ಕೃಷ್ಣಕುಮಾರ್ ಮೌರ್ಯ ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಇಬ್ಬರು ಆಟೋ ಚಾಲಕರನ್ನು ಕೃತ್ಯ ನಡೆದ ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನಕಪುರದ ಸೋಮಸಿದ್ದರಾಜು (32), ಹಾಗೂ ಮಂಡ್ಯದ ಜಗದೀಶ್ (30) ಬಂಧಿತ ಆರೋಪಿಗಳಾಗಿದ್ದಾರೆ  ಕಳೆದ 29ರ ಸಂಜೆ 5ರ ವೇಳೆ ಕುಮಾರಸ್ವಾಮಿ ಲೇಔಟ್‍ನ ಕೃಷ್ಣಕುಮಾರ್ ಮೌರ್ಯ ಅವರು ಯಲಚೇನಹಳ್ಳಿಯಲ್ಲಿ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿ ಬಳಿ ಇವರಿಬ್ಬರು ಆರೋಪಿಗಳು ಸಿಗರೇಟ್ ಖರೀದಿಸಲು ಬಂದಿದ್ದರು.

ಸಿಗರೇಟ್ ಕೊಡು ಮಗಾ ಎಂದು ಜಗದೀಶ್ ಕೇಳಿದ್ದು, ಉತ್ತರ ಪ್ರದೇಶ ಮೂಲದ ಕೃಷ್ಣಕುಮಾರ್ ಮೌರ್ಯ ಅವರಿಗೆ ತಪ್ಪಾಗಿ ಕೇಳಿಸಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿದಾಗ ಮೌರ್ಯ ಅವರು ಜಗದೀಶ್ ತಲೆಗೆ ಹೊಡೆದಿದ್ದಾರೆ.

ಇದರಿಂದ ಆಕ್ರೋಶಗೊಂಡ ಆತ ಆಟೋದಲ್ಲಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಬಂದು ಕೃಷ್ಣಕುಮಾರ್ ಅವರ ಕೈ ಹಾಗೂ ಕಾಲಿಗೆ ಚುಚ್ಚಿದರು. ಇದನ್ನು ನೋಡಿದ ಸ್ಥಳೀಯರು ಸಹಾಯಕ್ಕೆ ಬಂದಿದ್ದರಿಂದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಕೇವಲ 24 ಗಂಟೆಗಳೊಳಗೆ ಬಂಧಿಸಿ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ. ಗಾಯಗೊಂಡಿರುವ ಕೃಷ್ಣಕುಮಾರ್ ಮೌರ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ