ಮಲ್ಲೇಶ್ವರಂನ ಎಂಇಎಸ್ ಕಾಲೇಜು ಬಳಿ ಸರಗಳ್ಳತನ

chain snatchers

31-05-2018

ಬೆಂಗಳೂರು, ಮೇ 31-ಮಲ್ಲೇಶ್ವರಂನ ಎಂಇಎಸ್ ಕಾಲೇಜು ಹಾಗೂ 5ನೇ ಮುಖ್ಯರಸ್ತೆಯ ಎರಡು ಪ್ರತ್ಯೇಕ ಕಡೆಗಳಲ್ಲಿ ಸ್ಕೂಟರ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮಾಂಗಲ್ಯ ಸರಗಳನ್ನು ಕಸಿದು ಪರಾರಿಯಾಗಿದ್ದಾರೆ.

ಮಲ್ಲೇಶ್ವರಂನ ಎಂಇಎಸ್ ಕಾಲೇಜು ಬಳಿ ರಾತ್ರಿ 7ರ ವೇಳೆ ನಡೆದು ಹೋಗುತ್ತಿದ್ದ ರಾಜಿಪತಿ ಅವರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾದ ದುಷ್ಕರ್ಮಿಗಳು, 10 ನಿಮಿಷದ ಅವಧಿಯಲ್ಲಿ 5ನೇ ಮುಖ್ಯರಸ್ತೆಯ 7ನೇ ಕ್ರಾಸ್‍ಗೆ ಬಂದು ಆಟೋ ಹಿಡಿಯಲು ನಡೆದು ಹೋಗುತ್ತಿದ್ದ ಸ್ವಪ್ನ ಎಂಬುವರ 35 ಗ್ರಾಂ ತೂಕದ ಸರವನ್ನು ಕಸಿದಿದ್ದಾರೆ.

ಕೇವಲ 10 ನಿಮಿಷದ ಅವಧಿಯೊಳಗೆ ಇಬ್ಬರು ದುಷ್ಕರ್ಮಿಗಳು ಈ ಎರಡು ಕೃತ್ಯಗಳನ್ನು ನಡೆಸಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಡಿಯೋ ಮಾದರಿಯ ಸ್ಕೂಟರ್‍ನಲ್ಲಿ ಬಂದು ಕೃತ್ಯ ನಡೆಸಿದ್ದಾರೆ ಎಂದು ಮಹಿಳೆಯರು ನೀಡಿರುವ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಪೊಲೀಸರು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ