ವಿಶ್ವ ತಂಬಾಕು ರಹಿತ ದಿನ

World No Tobacco Day

31-05-2018

ಬೆಂಗಳೂರು, ಮೇ.31- ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದಲ್ಲಿ ಸಾರ್ವಜನಿಕ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಅನಂದರಾವ್ ವೃತ್ತದಿಂದ ಫ್ರೀಡಂಪಾರ್ಕ್ ವರೆಗೂ ನಡೆಸಿದ ಜಾಗೃತಿ ಮೆರವಣಿಗೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಯುವ ಸಮೂಹ ಪಾಲ್ಗೊಂಡಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ, ಭಾರತದಲ್ಲಿ ಪ್ರತಿ ವರ್ಷ ತಂಬಾಕು ಸೇವನೆಯಿಂದಾಗಿ 10ಲಕ್ಷ ಜನ ಸಾವಿಗೀಡಾಗುತ್ತಿದ್ದು, ಯುವ ಜನತೆ ತಂಬಾಕಿನಿಂದ ದೂರ ಉಳಿಯಬೇಕು ಎಂದು ಕರೆ ನೀಡಿದರು.

ತಂಬಾಕು ಉತ್ಪನ್ನಗಳ ಸೇವನೆಯಿಂದ ವಿಶ್ವದಲ್ಲಿ ಪ್ರತಿವರ್ಷ 69ಲಕ್ಷಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. (ಅಂದರೆ ದಿನಕ್ಕೆ ಸರಾಸರಿ 19 ಸಾವಿರ ಮಂದಿ) ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳನ್ನೇ ತಮ್ಮ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಮಾಡಿಕೊಂಡಿರುವ ತಂಬಾಕು ಉದ್ಯಮ ಇದರಿಂದ ಹೇರಳವಾಗಿ ಲಾಭ ಗಳಿಸುತ್ತಿದೆ. ಇತ್ತ ಈ ತಂಬಾಕು ಉತ್ಪನ್ನಗಳ ಚಟಕ್ಕೆ ಬಿದ್ದವರ ಜೀವ ಅಗ್ಗವಾಗುತ್ತಿದೆ.

ಸಿಗರೇಟಿನಲ್ಲಿರುವ ನಿಕೋಟಿನ್ ಅಂಶದಿಂದಾಗಿ ಹೃದಯದ ರಕ್ತನಾಳಗಳಲ್ಲಿ ಅಡೆತಡೆ ಉಂಟಾಗಿ ಹೃದಯಾಘಾತ ಸಂಭವಿಸಬಹುದು. ಒಂದೇ ಸಿಗರೇಟು ಸೇದಲಿ ಅಥವಾ ನೂರು ಸಿಗರೇಟು ಸೇದಲಿ ಹೃದಯಕ್ಕೆ ಆಗುವ ಹಾನಿಯನ್ನು ತಡೆಯಲಾಗದು. ಅದರಲ್ಲೂ 20ರಿಂದ 40 ವರ್ಷದೊಳಗಿನವರಲ್ಲಿ ಸಿಗರೇಟು ಸೇವನೆಯಿಂದ ಹೃದಯಾಘಾತಕ್ಕೀಡಾಗುವ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.

ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಮಾತ್ರ ಅಲ್ಲ, ಹೃದ್ರೋಗ ಮತ್ತು ಪಾಶ್ರ್ವವಾಯುನಂಥ ಗಂಭೀರ ಸಮಸ್ಯೆಯೂ ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಕಡಿಮೆ ಇದೆ ಎಂದು ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ ಅಭಿಪ್ರಾಯ ಪಟ್ಟಿದೆ.

ತಂಬಾಕು ಉತ್ಪನ್ನಗಳಿಂದಾಗಿ ಹೃದಯಾಘಾತಕ್ಕೀಡಾಗುವವರಲ್ಲಿ ಸಂಖ್ಯೆ ಚೀನಾದಲ್ಲಿ ಶೇ 61ರಷ್ಟಿದ್ದರೆ ಭಾರತದಲ್ಲಿ ಈ ಪ್ರಮಾಣ ಶೇ 36ರಷ್ಟಿದೆ. ಧೂಮಪಾನಿಗಳಷ್ಟೇ ಅಲ್ಲ ಸಿಗರೇಟಿನ ಹೊಗೆಯುಣ್ಣುವ ಶೇ 17ರಷ್ಟು ಮಂದಿಗೂ ಹೃದಯಾಘಾತದ ಸಾಧ್ಯತೆಗಳಿವೆ ಎಂದರು.ಇದೇ ವೇಳೆ ಅಂಚೆ ಇಲಾಖೆ ಹೊರ ತಂದಿರುವ ಅಂಚೆ ಚೀಟಿ ಬಿಡುಗಡೆ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ