ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್ ಐ ಆರ್

 FIR  on Duniya Vijay

31-05-2018

ಬೆಂಗಳೂರು,ಮೇ.31 ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧ ನಿರ್ಮಾಪಕ ಸುಂದರ್ ಗೌಡನ ರಕ್ಷಣೆಗೆ ಮುಂದಾದ ನಟ ದುನಿಯಾ ವಿಜಯ್ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದ ನಿರ್ಮಾಪಕ ಸುಂದರ್ ಗೌಡನನ್ನು ಬಂಧಿಸಲು ಹೋದಾಗ ವಿಜಯ್ ಕರ್ತವ್ಯ ಅಡ್ಡಿಪಡಿಸಿದ್ದರು ಎಂದು ಮುಖ್ಯಪೇದೆ ಗೋವಿಂದರಾಜು ದೂರು ನೀಡಿದ್ದರು

ದೂಉ ದಾಖಲಿಸಿ ತನಿಖೆ ಕೈಗೊಂಡ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ನಟ ವಿಜಯ್ ವಿರುದ್ಧ  ಸೆಕ್ಷನ್353, 225ರಡಿ ಪ್ರಕರಣ ದಾಖಲಿಸಿದ್ದಾರೆ  ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಿಬ್ಬರ ದುರಂತ ಸಾವಿನ ಸಂಬಂಧ ಜಾಮೀನು ರಹಿತ ವಾರೆಂಟ್ ಹಿನ್ನೆಲೆಯಲ್ಲಿ ಸುಂದರ್ ಪಿ ಗೌಡನನ್ನ ಬಂಧಿಸಲು ತಾವರೆಕೆರೆ ಪೊಲೀಸರು ಚನ್ನಮ್ಮನಕೆರೆ ಅಚ್ಚುಕಟ್ಟುವಿನ ಸುಂದರ್ ಮನೆಗೆ ಮಂಗಳವಾರ ಸಂಜೆ ಬಂದಿದ್ದರು.

ಈ ವೇಳೆ ಮನೆಯಲ್ಲಿ ಸುಂದರ್ ಹಾಗೂ ನಟ ದುನಿಯ ವಿಜಯ್ ಚರ್ಚೆಯಲ್ಲಿ ತೊಡಗಿದ್ದರು. ವಾರೆಂಟ್ ವಿಚಾರ ತಿಳಿಸಿದ ಪೊಲೀಸರು ಸುಂದರ್ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಬಟ್ಟೆ ಧರಿಸಿ ಬರುವುದಾಗಿ ಹೇಳಿ ಹೋಗಿದ್ದ ಸುಂದರಗೌಡ ಪರಾರಿಯಾಗಿದ್ದ

ಆರೋಪಿ ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆಯಿರುವುದರಿಂದ ಹೊರಹೋಗಿದ್ದಾರೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಿಜಯ್ ಮಾತನ್ನು ನಿರಾಕರಿಸಿದ ತಾವರೆಕೆರೆ ಪೊಲೀಸರು ಸುಂದರ್ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ