ಭಕ್ತರಿಗೆ ದಶ೯ನ ನೀಡುತ್ತಿರುವ ಸಿದ್ದಗಂಗಾ ಶ್ರೀಗಳು.

Kannada News

25-05-2017

 ಭಕ್ತರಿಗೆ ದಶ೯ನ ನೀಡುತ್ತಿರುವ ಸಿದ್ದಗಂಗಾ ಶ್ರೀಗಳು...

ತುಮಕೂರು:-ಪಿತ್ತನಾಳದ ಸೋಂಕಿನಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದ ಶಿವಕುಮಾರ ಸ್ವಾಮಿಗಳು ನೆನ್ನೆಯಿಂದ ಮಠಕ್ಕೆ ಬರುವ ಭಕ್ತಾಧಿಗಳಿಗೆ ದಶ೯ನ ನೀಡುತ್ತಿದ್ದಾರೆ.ಕಳೆದ ಹನ್ನೆರಡು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು ನೆನ್ನೆ ಸಂಜೆ ೫ ಗಂಟೆ ವೇಳೆಗೆ ಲವ ಲವಿಕೆಯಿಂದ ಮಠದ ಜಮೀನು ಕಡೆಗೆ ತೆರಳಿ  ಸುಮಾರು ಅಧ೯ ತಾಸಿಗೂ ಹೆಚ್ಚು ತೋಟದಲ್ಲಿ ಸುತ್ತಾಡಿದ್ದಾರೆ 
ನಂತರ ಅಲ್ಲಿಂದ ದಾಸೋಹ ಮಂಟಪದತ್ತ ತೆರಳಿದ ಅವರು ಸಂಜೆ ೬ ಗಂಟೆಯವರೆಗೂ ದಶ೯ನ ನಿಡಿದ್ದಾರೆ.ಶ್ರೀ ಗಳ ಚೇತರಿಕೆಯಂದ ಮಠದಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಪಿತ್ತಜನಕಾಂಗದ ಸೊಂಕಿನ ಕಾರಣ  ಮೇ ೧೨ ರಂದು ಬೆಂಗಳೂರಿನ ಜಿಬಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀ ಗಳು ೧೩ರಂದು ಮಠಕ್ಕೆ ವಾಪಸ್ಸಾಗಿ ಕಳೆದ ಸಂಭ್ರಮದಲ್ಲಿ ೧೨ ದಿನಗಳಿಂದ ವಿಶ್ರಾಂತಿಯಲ್ಲಿದ್ದರು. ಇದೀಗ ಚೇತರಿಸಿಕೊಂಡಿರುವ ಶ್ರೀಗಳಿಂದ ಮಠದಲ್ಲಿ ಸಂತಸ ಮನೆಮಾಡಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ