ಬೆಂಗಳೂರಲ್ಲಿ ನಡೀತು ಘನಘೋರ ಕೃತ್ಯ!

Husband brutally assault on his wife

30-05-2018

ಬೆಂಗಳೂರು: ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಪತಿರಾಯ ವಿಕೃತಿ ಮೆರೆದಿದ್ದಾನೆ. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಕ್ಕೆ ಪಾಪಿ ಪತಿ ಕ್ರೂರವಾಗಿ ಕಿರುಕುಳ ನೀಡಿದ್ದಾನೆ. ತನ್ನ ತವರು ಮನೆಯಿಂದ 10ಲಕ್ಷ ರೂ. ತರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ತನ್ನ ಪತ್ನಿಯ ಎದೆ ಹಾಗೂ ಮರ್ಮಾಂಗಕ್ಕೆ ಬರೆ ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರಿನ ಆವಲಹಳ್ಳಿಯಲ್ಲಿ ಈ ಘನಘೋರ ಕೃತ್ಯ ನಡೆದಿದೆ. ತಸ್ಲೀಮಾಳ ಎಂಬ ಮಹಿಳೆ ಕೃತ್ಯಕ್ಕೊಳಗಾದ ಮಹಿಳೆ. ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿ ಬಂದ ಪತ್ನಿ, ಪತಿ ಜಾವೇದ್ ನಿಂದ ಮುಕ್ತಿ ಕೊಡಿಸುವಂತೆ ಪೊಲೀಸರ ಬಳಿ ಅಂಗಾಲಾಚಿದ್ದಾರೆ. ನ್ಯಾಯಕ್ಕಾಗಿ ಶಿವಾಜಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ತಸ್ಲೀಮಾ.

 


ಸಂಬಂಧಿತ ಟ್ಯಾಗ್ಗಳು

Attempt to murder Horrific ಅಟ್ಟಹಾಸ ಹೆಣ್ಣು ಮಗು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ