ಗೌರಿ ಹತ್ಯೆ: 650 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

Gauri murder: 650 pages of chargsheet submitted to court

30-05-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಯಾಗಿ ಬರೋಬ್ಬರಿ ಎಂಟು ತಿಂಗಳ ಬಳಿಕ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅಧಿಕಾರಿಗಳು ಸುಮಾರು 650 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಆರೋಪಪಟ್ಟಿಯಲ್ಲಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನವೀನ್ ಕುಮಾರ್ ಆಲಿಯಾಸ್ ಹೊಟ್ಟೆ ಮಂಜ ಮೊದಲ ಆರೋಪಿಯಾಗಿದ್ದರೆ ಎರಡನೇ ಆರೋಪಿಯಾಗಿ ಪ್ರವೀಣ್ ಹೆಸರನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಗೌರಿ ಹತ್ಯೆ ಕುರಿತು ಆರೋಪಿ ನವೀನ್ ತನ್ನ  ಸ್ನೇಹಿತರ ಬಳಿ ಮಾಹಿತಿ ಹಂಚಿಕೊಂಡಿದ್ದ. ನವೀನ್ ನಾಪತ್ತೆಯಾಗಿರುವ ಬಗ್ಗೆ ಸ್ನೇಹಿತರು ಪ್ರಶ್ನಿಸಿದಾಗ ಗೌರಿ ಕೊಲೆ ಮಾಡಿದ್ದು ನಾವೇ ಎಂದಿದ್ದನಂತೆ. ಅಷ್ಟೇ ಅಲ್ಲದೇ ಇನ್ನಿಬ್ಬರು ಸ್ನೇಹಿತರ ಮುಂದೆ  ಪ್ರೋ.ಕೆ.ಎಸ್ ಭಗವಾನ್‍ನನ್ನು ಮುಗಿಸಬೇಕಿದೆ ಎಂದು ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.

ಪ್ರಕರಣದ ಮತ್ತೊಬ್ಬ ಅರೋಪಿ ಪ್ರವೀಣ್ ಚಿಕ್ಕ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ಕೋಡ್ ವರ್ಡ್‍ಗಳನ್ನ ನಮೂದು ಮಾಡಿದ್ದ. ಕೋಡ್ ವರ್ಡ್‍ಗಳಲ್ಲಿ ಹತ್ಯೆ ಹಿಂದಿನ ಕಾರ್ಯಾಚರಣೆ ಬಗ್ಗೆ ಮಾಹಿತಿ ಹಾಗೂ ಹೆಲ್ಮೆಟ್ ಬದಲಾಯಿಸುವುದು ಹೇಗೆ, ಬೈಕ್‍ ನಂಬರ್ ಪ್ಲೇಟ್ ಬದಲಾಯಿಸುವುದು ಹೇಗೆ ಎಂಬ ಬಗ್ಗೆ ಕೋಡ್ ವರ್ಡ್‍ನಲ್ಲಿ ಈತ ನಮೂದಿಸಿದ್ದ ಎನ್ನಲಾಗಿದೆ.

ಹೆಚ್ಚುವರಿ ಆರೋಪಪಟ್ಟಿ: ಪ್ರಕರಣದಲ್ಲಿ ಹೆಚ್ಚುವರಿ ಆರೋಪಪಟ್ಟಿಯನ್ನು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಳೆದ ಫೆಬ್ರವರಿ ಮಧ್ಯದಲ್ಲಿ ಬಂದೂಕುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಅವರನ್ನು ಬಂಧಿಸಲಾಗಿದ್ದು, ಈ ಸಂಬಂಧ ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

gauri lankesh Murder ಹೆಚ್ಚುವರಿ ಆರೋಪಪಟ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ