10ನೇ ಮಹಡಿಯಿಂದ ಕೆಳಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ!

Student suicide jumps from 10th floor!

30-05-2018

ಬೆಂಗಳೂರು: ತಲಘಟ್ಟಪುರದ ಮಲ್ಲಸಂದ್ರದಲ್ಲಿ ಪಿಯುಸಿ ಫೇಲಾಗಿದ್ದಕ್ಕೆ ಮನೆಯಲ್ಲಿ ಬೈದಿದ್ದರಿಂದ ವಿದ್ಯಾರ್ಥಿಯೊಬ್ಬ ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟವನನ್ನು ಮಲ್ಲಸಂದ್ರದ ಪುರವಂಕರ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ನವೀಮಾಮು ಎಂಬುವರ ಪುತ್ರ ಶೇಖ್‍ಅಬುದ್ದೀನ್ (18)ಎಂದು ಗುರುತಿಸಲಾಗಿದೆ. ಪಿಯುಸಿಯಲ್ಲಿ ಫೇಲಾಗಿದ್ದಕ್ಕೆ ಮನೆಯವರು ಬೈದು ಬೇರೆ ಕೋರ್ಸ್‍ಗೆ ಸೇರಿಸಲು ಮುಂದಾಗಿದ್ದರಿಂದ ನೊಂದ ಆತ, ಮುಂಜಾನೆ 3ರ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಕೆಳಗೆ ಹಾಕಿ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ತಲಘಟ್ಟಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Student suicide ಅಪಾರ್ಟ್‍ಮೆಂಟ್‍ ಮುಂಜಾನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ