ಮಹಿಳೆ ಮೇಲೆ ಚಾಕುವಿನಿಂದ ಭೀಕರ ಹಲ್ಲೆ

Badly assault on a woman at bengaluru

30-05-2018

ಬೆಂಗಳೂರು: ಕೆಆರ್ ಪುರಂನ ಪೈಲೇಔಟ್‍ನಲ್ಲಿ ನಿನ್ನೆ ರಾತ್ರಿ ಮನೆಯ ಮುಂದೆ ವಾಯು ವಿಹಾರ ನಡೆಸುಡುತ್ತಿದ್ದ ಮಹಿಳೆ ಮೇಲೆ ಆಕೆಯ ಪತಿಯ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಮಹದೇವಪುರ ಪೊಲೀಸರ ಅತಿಥಿಯಾಗಿದ್ದಾನೆ.

ಗಾಯಗೊಂಡಿರುವ ಪೈಲೇಔಟ್‍ನ ಲುಮೀನಾ (35) ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಸಿದವನನ್ನು ಮಹದೇವಪುರ ಪೊಲೀಸರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಲುಮೀನಾ ಅವರ ಪತಿ ಪ್ರೇಮ್ ಕುಮಾರ್ನ ಸ್ನೇಹಿತ ರೋಹಿತ್ ಬಂಧಿತ ಆರೋಪಿಯಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳಿದ್ದ ಲುಮೀನಾ ಹಾಗೂ ಪ್ರೇಮ್‍ಕುಮಾರ್ ದಂಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ಬರಲಿದ್ದು ಅದರ ಮುನ್ನವೇ ಈ ಕೃತ್ಯ ನಡೆದಿದೆ.

ಸಿಸಿಟಿವಿಯಲ್ಲಿ ಸೆರೆ: ಪೈಲೇಔಟ್‍ನ ಮನೆಯಿಂದ ರಾತ್ರಿ 10.50 ರ ವೇಳೆಗೆ ಲುಮೀನಾ ತಮ್ಮ ಮನೆಯಿಂದ ಹೊರ ಬರುತ್ತಾರೆ. ಅವರ ಜತೆ ಮತ್ತೊಬ್ಬ ಮಹಿಳೆಯೂ ಇರುತ್ತಾರೆ. ಲುಮೀನಾ ತಮ್ಮ ಮಗುವಿನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಕೂಟರ್ ನಲ್ಲಿ ಬಂದ ರೋಹಿತ್ ಏಕಾಏಕಿ ಅವರ ಮೇಲೆ ದಾಳಿ ನಡೆಸುತ್ತಾನೆ.

ಈ ವೇಳೆ ಭಯಗೊಂಡ ಮತ್ತೊಬ್ಬ ಮಹಿಳೆ ಮತ್ತು ಮಗು ಅಲ್ಲಿಂದ ಓಡಿ ಹೋಗ್ತಾರೆ. ಆಗ ಆರೋಪಿ ರೋಹಿತ್ ಲುಮೀನಾಗೆ ಚಾಕುವಿನಿಂದ 15ಕ್ಕೂ ಹೆಚ್ಚು ಬಾರಿ ದೇಹದ ತುಂಬಾ ಇರಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿವೆ. ಪ್ರಾಣ ಹೋಗುವವರೆಗೂ ಚಾಕುವಿನಿಂದ ಇರಿಯುವ ಉದ್ದೇಶದಿಂದ ತಲೆಯ ಭಾಗಕ್ಕೂ ಹಲ್ಲೆ ಮಾಡಿದ್ದಾನೆ. ಮನೆಯಿಂದ ಯಾರೋ ಹೊರ ಬರುತ್ತಿದ್ದಾರೆ ಅನ್ನೋ ಸೂಚನೆ ಸಿಗುತ್ತಿದ್ದಂತೆ ಆರೋಪಿ ಬೈಕ್‍ನೊಂದಿಗೆ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Assault bengaluru ಸಿಸಿಟಿವಿ ಸ್ಕೂಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ