ಬ್ಯಾಂಕಿಂಗ್ ವ್ಯವಹಾರ ಸ್ಥಗಿತ: ಗ್ರಾಹಕರ ಪರದಾಟ

Banking business breakdown!

30-05-2018

ಬೆಂಗಳೂರು: ಸರ್ಕಾರಿ ಬ್ಯಾಂಕುಗಳ ನೌಕರರ ವೇತನ ಪರಿಷ್ಕರಣೆ ಮಾಡಲು ನಿರಾಕರಿಸಿದ ಭಾರತೀಯ ಬ್ಯಾಂಕುಗಳ ಸಂಘದ ಧೋರಣೆಯನ್ನು ಖಂಡಿಸಿ ಬುಧವಾರದಿಂದ ನಡೆಸುತ್ತಿರುವ ಎರಡು ದಿನಗಳ ಬ್ಯಾಂಕ್ ಮುಷ್ಕರದಿಂದ ಬಹುತೇಕ ಸರ್ಕಾರಿ ಸ್ವಾಮ್ಯದ  ಬ್ಯಾಂಕಿಂಗ್ ವ್ಯವಹಾರಗಳು ಸ್ಥಗಿತಗೊಂಡು ಗ್ರಾಹಕರು ಪರದಾಡುವಂತಾಯಿತು.

ಸುಮಾರು 10ಲಕ್ಷ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಬ್ಯಾಂಕಿಂಗ್ ವ್ಯವಹಾರದಲ್ಲಿ  ವ್ಯತ್ಯಯ ಕಂಡುಬಂತು ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದ ಗ್ರಾಹಕರು ಬ್ಯಾಂಕಿಂಗ್ ವ್ಯವಹಾರಗಳಿಗೆ ಖಾಸಗಿ ಬ್ಯಾಂಕ್‍ಗಳನ್ನೇ ಅವಲಂಬಿಸಬೇಕಾಯಿತು.

ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರತೀಯ ಬ್ಯಾಂಕುಗಳ ಸಂಘದ (ಐಬಿಎ) ಜೊತೆ ನೌಕರರ ಸಂಘಟನೆಗಳು ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ.

ವೇತನ ಪರಿಷ್ಕರಣೆ ಸಂಬಂಧ ನಡೆದ ಕೊನೆಯ ಹಂತದ ಮಾತುಕತೆಯೂ ಮುರಿದು ಬಿದ್ದಿದ್ದರಿಂದ ಇಂದು ಮತ್ತು ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ತಿಂಗಳ ಅಂತ್ಯದಲ್ಲಿ ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರಿ ನೌಕರ ವೇತನ ಒಂದು ವಾರ ವಿಳಂಬವಾಗುವ ಸಾಧ್ಯತೆಗಳಿವೆ

ಬ್ಯಾಂಕ್ ನೌಕರರ ಸಂಘಟನೆಗಳು ಶೇ. 2ರಷ್ಟು ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದವು. ಅದಕ್ಕೆ ಒಪ್ಪದಿದ್ದ ಕಾರಣ ಮುಷ್ಕರ ನಡೆಯುತ್ತಿದೆ. ಹಲವು ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗದೆ ನೌಕರರು ರಸ್ತೆಗಿಳಿದಿದ್ದಾರೆ. ನೌಕರರ ಮುಷ್ಕರದಿಂದಾಗಿ ಎಟಿಎಂ ವ್ಯವಸ್ಥೆಯಲ್ಲಿ ಏರುಪೇರಾಗಬಹುದು. ಹಾಗೆಯೇ ಆನ್‍ಲೈನ್ ಬ್ಯಾಂಕಿಂಗ್ ಚಟುವಟಿಕೆಗಳಿಗೂ ತೊಂದರೆಯಾಗಲಿದೆ. ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಕರೆಯ ಮೇಲೆ ಎರಡು ದಿನಗಳ ಪ್ರತಿಭಟನೆ ದೇಶದಾದ್ಯಂತ ನಡೆಯುತ್ತಿದೆ.

ವೇದಿಕೆಯ ಉಪಾಧ್ಯಕ್ಷ ಅಶ್ವಿನಿ ರಾಣಾ ಮಾತನಾಡಿ, ವೇತನ ಪರಿಷ್ಕರಣೆ ಸಂಬಂಧ ನಡೆಯುತ್ತಿರುವ ಮುಷ್ಕರದಲ್ಲಿ 10ಲಕ್ಷಕ್ಕೂ ಹೆಚ್ಚು ನೌಕರರು ದೇಶದಾದ್ಯಂತ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ವೇತನ ಪರಿಷ್ಕರಣೆ, ಸೇವೆಯಲ್ಲಿ ಸುಧಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಯುತ್ತಿದ್ದು, ಬ್ಯಾಂಕ್‍ಗಳ ಮುಂದೆ ಧರಣೆ ನಡೆಸುತ್ತಿರುವ ನೌಕರರು ಐಬಿಎ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬ್ಯಾಂಕ್ ನೌಕರರ ಪರ ಬೆಂಬಲ ವ್ಯಕ್ತಪಡಿಸಿರುವ ಮುಖ್ಯ ಕಾರ್ಮಿಕ ಆಯುಕ್ತರು, ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕುಗಳು ನೌಕರರು ಮುಷ್ಕರದಲ್ಲಿ ತೊಡಗಿದ್ದಾರೆ.

21 ಸಾರ್ವಜನಿಕ ಉದ್ದಿಮೆ ಬ್ಯಾಂಕುಗಳು ದೇಶದ ಶೇ.75ರಷ್ಟು ಆರ್ಥಿಕ ವ್ಯವಹಾರಗಳನ್ನು ನಡೆಸುತ್ತವೆ. ಐಸಿಐಸಿಐ, ಹೆಚ್‍ಡಿಎಫ್‍ಸಿ, ಆಕ್ಸಿಸ್ ಮತ್ತು ಕೋಟಾಕ್ ಮಹೀಂದ್ರ ಸೇರಿದಂತೆ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಬ್ಯಾಂಕ್ ನೌಕರರ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬಂದ ಗ್ರಾಹಕರು ಬ್ಯಾಂಕುಗಳಿಗೆ ಬಂದು ಹಿಂತಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ವರ್ಷ ನಡೆದಿದ್ದ ಬ್ಯಾಂಕ್ ಉದ್ಯೋಗಿಗಳ ಮುಷ್ಕರದಿಂದ ಎಟಿಎಂಗಳು ಖಾಲಿಯಾಗಿದ್ದವು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ