ಟೆಂಪೋ ಮತ್ತು ಖಾಸಗಿ ಬಸ್ ಮುಖಾಮುಖಿ ಢಿಕ್ಕಿ 6 ಮಂದಿ ಸಾವು !

Kannada News

25-05-2017

ಉತ್ತರ ಕನ್ನಡ:-ಮದುವೆಗೆ ತೆರಳುತ್ತಿದ್ದ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬಸ್ ಚಾಲಕ ಸೇರಿ 6ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಅನಂತವಾಡಿ ಸಮೀಪ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ, ಟೆಂಪೋದಲ್ಲಿದ್ದ ಪ್ರಯಾಣಿಕರು ಧಾರವಾಡದಿಂದ ಮಂಗಳೂರಿಗೆ ಮದುವೆಗೆ ತೆರಳುತ್ತಿದ್ದರು.ಖಾಸಗಿ ಬಸ್ ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ವೇಳೆ ಈ ದುರಂತ ನಡೆದಿದೆ, ಅಪಘಾತದಲ್ಲಿ ಬಸ್ ಚಾಲಕ ಉಮೇಶ (35), ಟೆಂಪೋದಲ್ಲಿದ್ದ ಪಾಲಾಕ್ಷಿ (38), ಬೇಬಿ (38) ನಾಗಪ್ಪ (46),ಸುಬ್ರಮಣ್ಯ (15) ಇವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇನ್ನೂ ಅಪಘಾತದಲ್ಲಿ ಗಾಯಗೊಂಡವರನ್ನು ಮಣಿಪಾಲ ಹಾಗೂ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಮದುಮಗಳು ದಿವ್ಯಾ ಗಾಣಿಗೇರ,ಬಸ್ ಚಾಲಕ ಉಮೇಶ ವಾಲ್ಮಿಕಿ (35), ಪಾಲಾಕ್ಷಿ (38), ಬೇಬಿ (38) ನಾಗಪ್ಪ (46),ಸುಬ್ರಮಣ್ಯ (15),ಪೂಜಾ ಶೇಟ್(೨೬) ಅವರಿಗೆ ಗಂಭೀರ ಗಾಯಗಳಾಗಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ