‘ಸಾಲಮನ್ನಾ ನೂರಕ್ಕೆ ನೂರರಷ್ಟು ಸತ್ಯ’- ಹೊರಟ್ಟಿ30-05-2018

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಮುಂದಿನ ಎರಡು-ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ. ರೈತರ ಸಾಲಮನ್ನಾ ಕುರಿತು ಕುಮಾರ ಸ್ವಾಮಿ ಹಿಂದೆ ಸರಿಯುವುದಿಲ್ಲ ಎಂದು ವಿಶ್ವಾಸದ ಮಾತುಗಳನ್ನು ನುಡಿದಿದ್ದಾರೆ.

ಬಿಜೆಪಿಯವರು 'ಕಾಂಗ್ರೆಸ್ ಮುಕ್ತ' ಮಾಡಲು ಹೊರಟಿದ್ದರು. ಯಾವುದೇ ಚರ್ಚೆ ಮಾಡದೇ ಕಾಂಗ್ರೆಸ್ ನವರ ಬೆಂಬಲಕ್ಕೆ ಜೆಡಿಎಸ್ ಒಪ್ಪಿತ್ತು. ಸಚಿವ ಸ್ಥಾನಗಳ ಹಂಚಿಕೆ ವಿಷಯದಲ್ಲಿ ಜೆಡಿಎಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. 22 ಸಚಿವ ಸ್ಥಾನ ಕಾಂಗ್ರೆಸ್ ನವರಿಗೆ, 12 ಜೆಡಿಎಸ್ ಗೆ, ಎರಡೂ ಪಕ್ಷದವರು ತಾಳ್ಮೆಯಿಂದ ನಡೆದುಕೊಳ್ಳಬೇಕು ಎಂದರು. ಹಿಂದಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಹಣಕಾಸು ಖಾತೆಗಾಗಿ ಜೆಡಿಎಸ್ ಕೇಳಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಹೊಂದಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಖಾತೆ ಕೇಳಿದೆ. ಕಾಂಗ್ರೆಸ್ ನವರು ಹೊಂದಾಣಿಕೆ ಮಾಡಿಕೊಳ್ಳಬೇಕು.

ಬಿಜೆಪಿಯವರಿಗೆ ಕುದುರೆ ವ್ಯಾಪಾರ ಅಪರೇಷನ್ ಕಮಲ ಮಾಡುವುದಕ್ಕೆ ಬಿಡಬಾರದು ಇದು ಜನರ ಅಭಿಪ್ರಾಯವಾಗಿದೆ. ಕೇಂದ್ರ ಸರ್ಕಾರದವರು ರಾಜ್ಯವನ್ನು ದುರೋಪಯೋಗ ಮಾಡಿಕೊಳ್ಳಬಾರದು. ಹಣಕಾಸು ಖಾತೆ ಬಗ್ಗೆ ಇಂದು ಸಂಜೆ ಅಥವಾ ನಾಳೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಡಿಕೆಶಿ ಹಾಗೂ ರೇವಣ್ಣರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಾಸಕರು ಯಾರು ಬೇರೆ ಪಕ್ಷಕ್ಕೇ ಹೋಗುವುದಿಲ್ಲ. ಈ ಹಿಂದೆ ಬಿಜೆಪಿಯವರು ಬಂಡಧೈರ್ಯ ಮಾಡಿದ್ದರು ಎಂದು ಟೀಕೆ ಮಾಡಿದ್ದಾರೆ. ಯಾವುದೇ ಶಾಸಕರು ರಾಜೀನಾಮೆ ನೀಡಿವುದಿಲ್ಲ. ಬಟ್ಟೆಯಲ್ಲಿ ಯಾರೂ ಇರುವೆ ಬಿಟ್ಟುಕೊಳ್ಳುವುದಿಲ್ಲ. ಎರಡೂ ಪಕ್ಷಗಳು ಸೇರಿ ಉತ್ತಮ ಆಡಳಿತ ನೀಡುತ್ತವೆ.

‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ’ ಎಂದು ಹೊರಟ್ಟಿ ಹೇಳಿದ್ದರಾದರೂ, ಒಂದು ವೇಳೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ ಎಂದರು.

ಜನರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ರೈತರ ಸಾಲಮನ್ನಾ ಕುರಿತಾಗಿ ಧ್ವನಿ ಎತ್ತಿದ ಜೆಡಿಎಸ್ ಗೆ ರೈತರು ಮತ ನೀಡಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಮಹಾದಾಯಿ ವಿಚಾರವಾಗಿ ಹೋರಾಟ ಮಾಡಿದ ಜೆಡಿಎಸ್ ಪಕ್ಷದ ಕೋನರೆಡ್ಡಿಯವರನ್ನು ಜನರು ಸೋಲಿಸಿದರು. ಉತ್ತರ ಕರ್ನಾಟಕದ ನಿರ್ಲಕ್ಷ್ಯದ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸುವೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣವಾಗಿ ಶ್ರಮಿಸುವೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ವೆಚ್ಚವಾಗುತ್ತದೆ. ಇದಕ್ಕೆ ಸರ್ಕಾರ ಸಮ್ಮತಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ