ಇಂದು ದಕ್ಷಿಣ ಕನ್ನಡ ಭೇಟಿ: ಡಿಸಿಎಂ

DCM parameshwara visit to dakshina kannada today

30-05-2018

ಬೆಂಗಳೂರು: ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ತಂದೆ ಕಾಲದಿಂದಲೂ ಮಠದ  ಜೊತೆಗಿನ ಒಡನಾಟ ಹೆಚ್ಚಾಗಿಯೇ ಇತ್ತು. ಡಿಸಿಎಂ ಆದ ಬಳಿಕ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೆ' ಎಂದರು.

ರಾಜ್ಯದ ಆಡಳಿತ ಸಮಾಧಾನಕರವಾಗಿರಬೇಕು ಹಾಗೂ ಉತ್ತಮ ಆಡಳಿತ ಕೊಡಬೇಕು ಅನ್ನೋದು ಶ್ರೀಗಳ ಆಶಯವೂ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಹಾ ಮಳೆ ವಿಚಾರವಾಗಿ, ಪ್ರತಿಕ್ರಿಯಿಸಿ ತಾವು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದರು. ಪರಿಷತ್ ಗೆ ಅಭ್ಯರ್ಥಿಗಳ ಆಯ್ಕೆ ಇವತ್ತೇ ಫೈನಲ್ ಆಗಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

G.Parameshwara DCM ದಕ್ಷಿಣ ಕನ್ನಡ ಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ