ಮತ್ತೆ ನಿದ್ದೆಗೆಡಿಸಿದ ಕಳ್ಳರು!

vijayapura: thieves stolen 2 lakh worth products at mobile shop

30-05-2018

ವಿಜಯಪುರ: ಕಳೆದ ಕೆಲ ದಿನಗಳ ಹಿಂದೆ ಕಳ್ಳರು ವಿಜಯಪುರದಲ್ಲಿ ಅಂಗಡಿ ಮಾಲೀಕರ, ಸ್ಥಳೀಯರ ನಿದ್ದೆಗೆಡಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯ ಜಿ.ತಿಕೋಟ ಪಟ್ಟಣದಲ್ಲಿನ ಮೊಬೈಲ್ ಅಂಗಡಿಗೆ ಕನ್ನ ಹಾಕಿದ್ದಾರೆ. ಪಟ್ಟಣದ ಗ್ಲೋಬಲ್ ಕಮ್ಯೂನಿಕೇಶನ್ ಎಂಬ ಅಂಡಿಯಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ತಗಡಿನ ಮೇಲ್ಛಾವಣಿ ಕೊರೆದು ಅಂಗಡಿಗೆ ನುಗ್ಗಿದ ಕಳ್ಳರು, 2ಲಕ್ಷ ಬೆಲೆ ಬಾಳುವ ಮೂರು ಎಲ್.ಇ.ಡಿ ಟಿ.ವಿ, 12 ಮೊಬೈಲ್ ಗಳನ್ನು ಕದ್ದೊಯ್ದಿದ್ದಾರೆ. ಕಳ್ಳರ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತಿಕೋಟ ಠಾಣೆ ಪೊಲೀಸರು, ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mobile thief ಮೇಲ್ಛಾವಣಿ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ