ಸಿಎಂ ಮನೆಗೆ ಹುಚ್ಚ ವೆಂಕಟ್ ಹೋಗಿದ್ಯಾಕೆ?

Actor huchha venkat visited to

30-05-2018

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುವ ನಟ ಹುಚ್ಚ ವೆಂಕಟ್, ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಅವರ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಹುಚ್ಚಾ ವೆಂಕಟ್ ಅವರನ್ನು ಗೇಟ್ ನಿಂದ ಒಳಗೆ ಬಿಡಲಿಲ್ಲ ಸಿಬ್ಬಂದಿ. ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗದ ಕಾರಣ ತೀವ್ರ ಆಕ್ರೋಶಗೊಂಡಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟ್, ‘ಸಿಎಂ ಪಿಎ ನನನ್ನು ಒಳಗೆ ಹೋಗಲು ಬಿಟ್ಟಿಲ್ಲ. ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡಲು ಬಂದಿದ್ದೆ. ಸಾಲಮನ್ನಾ ಮಾಡಲೇ ಬೇಕು ಇಲ್ಲ ಅಂದ್ರೆ ನಾನ್ ಬಿಡಲ್ಲ, ಸಮಯ ತಗೋಳಿ, ಆದ್ರೆ ಮಾಡಲೇಬೇಕು ಎಂದರು'. ಮತ್ತೆ ಸಿಎಂ ಕುಮಾರಸ್ವಾಮಿ ಮನೆಗೆ ಇನ್ನು ಮುಂದೆ ನನ್ನ ಎಕ್ಕಡ ಕೂಡ ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

hd kumaraswamy loan waiver ವಿವಾದ ಹುಚ್ಚ ವೆಂಕಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ