ಗರ್ಭಿಣಿ ಮೇಲೆ ಐವರಿಂದ ಹಲ್ಲೆ

A pregnant lady assaulted by neighbours at kolar

29-05-2018

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಐದು ತಿಂಗಳ ಗರ್ಭಿಣಿ ಮೇಲೆ ನೆರೆಮನೆಯ ಐವರ ತಂಡ ಹಲ್ಲೆ ಮಾಡಿದ್ದಾರೆ. ಗರ್ಭಿಣಿಗೆ ಗರ್ಭಪಾತವಾಗುವಂತೆ ಹಲ್ಲೆ ಮಾಡಿರುವ ಹಿನ್ನೆಲೆ, ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿದೆ. ಕೋಲಾರ ತಾಲ್ಲೂಕು ನೆರ್ನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವರಲಕ್ಷ್ಮಿ ಹಲ್ಲೆಗೊಳಗಾಗಿ ಗರ್ಭಪಾತವಾಗಿರುವ ಮಹಿಳೆ. ಈಕೆ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಕೋರರನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

pregnant neighbours ಗರ್ಭಪಾತ ನೆರೆಮನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ