ಅಪಘಾತದಲ್ಲೂ ಅಮಾನವೀಯತೆ ಮೆರೆದ ದುಷ್ಟರು

Bus accident: old couple died

29-05-2018

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ತಿಪ್ಪಗೊಂಡನಹಳ್ಳಿ ಬಳಿ ಮುಂಜಾನೆ ಹಿಂದಿನಿಂದ ವೇಗವಾಗಿ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಸ್‍ಎಸ್‍ಆರ್ಟಿಸಿ)ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ವೃದ್ಧ ದಂಪತಿ ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಶಿವಮೊಗ್ಗದ ನ್ಯಾಮತಿಯ ದೇವಪ್ಪ(60), ಲಕ್ಷ್ಮಮ್ಮ(55)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ನಿರ್ವಾಹಕ ಚಂದ್ರಾನಾಯಕ್ ಸೇರಿದಂತೆ 7 ಮಂದಿಯನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಶಿವಮೊಗ್ಗದಿಂದ ನಗರಕ್ಕೆ ಬರುತ್ತಿದ್ದ ಕೆ.ಎಸ್‍.ಆರ್.ಟಿ.ಸಿ ಬಸ್ ಮುಂಜಾನೆ 5.30ರ ವೇಳೆ ನೆಲಮಂಗಲದ ತಿಪ್ಪಗೊಂಡನಹಳ್ಳಿ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಎಡಗಡೆಯಿಂದ ಡಿಕ್ಕಿ ಹೊಡೆದಿದ್ದಾನೆ, ಎಡ ಭಾಗದಲ್ಲಿ ಕುಳಿತಿದ್ದ ದೇವಪ್ಪ ದಂಪತಿ ಸ್ಥಳದಲ್ಲಿಯೇ ಮೃತಪಟ್ಟು ಉಳಿದ 7 ಮಂದಿ ಗಾಯಗೊಂಡಿದ್ದಾರೆ. ಅಪಘಾತ ನಡೆಯುತ್ತಿದ್ದಂತೆ ಬಸ್ ಚಾಲಕ ಕರೀಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಪಘಾತ ನಡೆದ ವೇಳೆ ಹೆದ್ದಾರಿಯ ಸವಾರರು ಅಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಘಟನೆಯ ವೇಳೆ ಮೃತರು ಬಸ್‍ನಿಂದ ಹೊರಗೆ ಬಿದ್ದಿದ್ದನ್ನು ಗಮನಿಸಿದ ಹೆದ್ದಾರಿ ಸವಾರರು ನೆರವು ನೀಡುವ ಬದಲು ಮೃತರ ಬಳಿಯಿದ್ದ ಹಣ ಒಡವೆ ಪರ್ಸ್ ಅನ್ನು ಕದ್ದಿದ್ದಾರೆ. ಕದಿಯುವ ಭರದಲ್ಲಿ ಮೃತ ದಂಪತಿ ಬಳಿ ಇರುವ ಗುರುತಿನ ಚೀಟಿಯನ್ನ ಸಹ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಸಂಚಾರ ಪೊಲೀಸರು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಪರಿಹಾರ ಕಾರ್ಯ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KSRTC Accident ಹೆದ್ದಾರಿ ಅಮಾನವೀಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ