ವೈದ್ಯಕೀಯ ಸಮಾವೇಶದಲ್ಲಿ ಇದೆಂಥಾ ಘಟನೆ!

The jewels of a doctor were stolen!

29-05-2018

ಬೆಂಗಳೂರು: ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಪಂಚತಾರಾ ಹೊಟೇಲೊಂದರಲ್ಲಿ ನಡೆಯುತ್ತಿದ್ದ ವೈದ್ಯಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೈದ್ಯೆಯೊಬ್ಬರ ಚಿನ್ನಾಭರಣಗಳನ್ನು ನೂರಾರು ಜನರ ಸಮ್ಮುಖದಲ್ಲೇ ಕಳವು ಮಾಡಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ಕಳೆದ ಮೇ. 24ರಂದು ನಡೆದ ವೈದ್ಯಕೀಯ ಕ್ಷೇತ್ರದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಂಜೀತ್ ಮೆಹ್ತಾ ಎಂಬ ವೈದ್ಯೆಯು ತಮ್ಮ ಬಳಿ ಇದ್ದ ಆಭರಣಗಳನ್ನು ಬ್ಯಾಗ್‍ನಲ್ಲಿಟ್ಟು ಅದನ್ನು ಕುರ್ಚಿ ಪಕ್ಕದಲ್ಲಿಟ್ಟು ಭಾಷಣ ಆಲಿಸುತ್ತಿದ್ದರು. ಸಮಾವೇಶ  ಮುಗಿದ ಮೇಲೆ ಮಂಜೀತ್ ಮೆಹ್ತಾ ತಮ್ಮ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿದ್ದ ಆಭರಣಗಳು ಇರಲಿಲ್ಲ.

ಕಳವುವಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಕೂಡಲೇ ಹೋಟೆಲ್‍ನ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕರಾಮತ್ತು ಬಯಲಾಗಿದೆ. ವೈದ್ಯೆಯ ಹಿಂದಿನ ಕುರ್ಚಿಯಲ್ಲಿ ಕುಳಿತಿದ್ದ ಖತರ್ನಾಕ್ ಕಳ್ಳ ಬ್ಯಾಗ್‍ನಲ್ಲಿದ್ದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದನು. ಮಂಜೀತ್ ಮೆಹ್ತಾ ಕಾನ್ಫರೆನ್ಸ್ ನೋಡುತ್ತಿದ್ದ ವೇಳೆ ಹಿಂದೆ ಕುಳಿತಿದ್ದ ಕಳ್ಳ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದನು ಹಲವು ಮಂದಿ ಸುತ್ತಮುತ್ತ ಇದ್ದರೂ ಯಾರಿಗೂ ಗೊತ್ತಾಗದಂತೆ ಚಿನ್ನಾಭರಣ ಕದ್ದ ನಂತರ ಪರಾರಿಯಾಗಿದ್ದ.

ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 100 ಗ್ರಾಂ. ತೂಕದ ಚಿನ್ನಾಭರಣ ಕಳುವಾಗಿದೆ ಎಂದು ವೈದ್ಯೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.


ಸಂಬಂಧಿತ ಟ್ಯಾಗ್ಗಳು

Le Meridien Thief ಹೈಗ್ರೌಂಡ್ಸ್ ಚಿನ್ನಾಭರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ