ಬುರ್ಖಾ,ಗ್ಲೌಸ್,ಮಚ್ಚು ಮತ್ತು ಅನುಮಾನಾಸ್ಪದ ವ್ಯಕ್ತಿ!

Burqa, gloves and knife suspected man handed over to police!

29-05-2018

ಬೆಂಗಳೂರು: ಹೆಚ್.ಆರ್.ಬಿ.ಆರ್ ಲೇಔಟ್‍ನ ಮಸೀದಿಯೊಂದರ ಬಳಿ ಬುರ್ಖಾ ಹಾಕಿಕೊಂಡು ಕೈಗೆ ಗ್ಲೌಸ್ ಹಾಕಿಕೊಂಡು ಮಚ್ಚು ಹಿಡಿದು ಅನುಮಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರೇ ಹಿಡಿದು ಕೆಜಿ ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾರ್ವಜನಿಕರು ಹಿಡಿದುಕೊಟ್ಟ ವ್ಯಕ್ತಿಯು ರಾಯಚೂರು ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ. ಕೆಜಿ ಹಳ್ಳಿಯ ಹೆಚ್.ಆರ್.ಬಿ.ಆರ್ ಲೇಔಟ್ ಬಳಿಯ ಮಸೀದಿಯೊಂದರ ಬಳಿ ನಿನ್ನೆ ರಾತ್ರಿ ಬುರ್ಖಾ ಹಾಕಿಕೊಂಡು ಈತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಬುರ್ಖಾ ಪರದೆ ಸರಿಸಿ ನೋಡಿದಾಗ ಆ ವ್ಯಕ್ತಿ ಮಹಿಳೆಯಲ್ಲ ಎನ್ನುವುದು ಗೊತ್ತಾಗಿದೆ.

ತಕ್ಷಣವೇ ಆತನನ್ನು ಹಿಡಿದು ಪರಿಶೀಲಿಸಿದಾಗ ಆತನ ಬಳಿ ಮಚ್ಚು ಸಿಕ್ಕಿದೆ. ಇದರ ಜತೆಗೆ ಆತ ತನ್ನ ಕೈಗೆ ರಬ್ಬರ್ ಗ್ಲೌಸ್ ಹಾಕಿಕೊಂಡಿದ್ದ. ಈತನನ್ನು ರಾಯಚೂರು ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ. ಸ್ನೇಹಿತನೋರ್ವನಿಂದ ಸಾಲ ಪಡೆದಿದ್ದೆ. ಆತ ಸಾಲ ವಾಪಸ್ ಮಾಡುವಂತೆ ಬಲವಂತ ಮಾಡುತ್ತಿದ್ದ. ಹೀಗಾಗಿ ಆತನನ್ನು ಎದುರಿಸಲು ಮಚ್ಚು ಮತ್ತು ಬುರ್ಖಾ ಹಾಕಿಕೊಂಡು ಹೋಗುತ್ತಿದ್ದೆ ಎಂದು ಸ್ಥಳೀಯರಿಗೆ ಹೇಳಿದ್ದಾನೆ.

ಸ್ನೇಹಿತನ ಕೊಲೆ ಮಾಡಲು ಶಿವರಾಜ್ ಈ ರೀತಿ ಬುರ್ಖಾ ಹಾಕಿಕೊಂಡು ಸಂಚು ನಡೆಸಿದ್ದ ಎಂದು ಸ್ಥಳೀಯರು ಆರೋಪಿಸಿ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೇ ಪ್ರದೇಶದಲ್ಲಿ ಶಿವರಾಜ್ ವಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶಿವರಾಜ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

burka Murder ಅನುಮಾಸ್ಪದ ಸ್ನೇಹಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ