ಸಾಲಮನ್ನಾ: ಸಿಎಂ ಮಾತನ್ನೇ ಪುನರುಚ್ಚರಿಸಿದ ಜಿಟಿಡಿ

GT Devegowda

29-05-2018

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಮೈಸೂರಿನ‌ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಬಾರಿಯ ಚುನಾವಣೆ ವೈಶಿಷ್ಟ್ಯಪೂರ್ಣ ಚುನಾವಣೆ. ಮೈಸೂರು ಭಾಗದ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿದ್ದೀರಿ, ಅದಕ್ಕಾಗಿ ಈ ಭಾಗದ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಬಾರಿ ಅತಂತ್ರ‌ ವಿಧಾನಸಭೆ ನಿರ್ಮಾಣ‌ವಾಗುತ್ತದೆ  ಎಂದು ಮಾಧ್ಯಮಗಳು ಹೇಳಿದ್ದೂ, ಅದೇ ರೀತಿ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾನೂ ಸಹ ಹೇಳಿದ್ದರು. ಹೆಚ್ಚು ಸ್ಥಾನ ಪಡೆದ ‌ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸಫಲರಾಗಿಲ್ಲ. ಬಿಎಸ್ ವೈ ಮುಖ್ಯಮಂತ್ರಿ ಆದರೂ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದರು.

ಕಾಂಗ್ರೆಸ್ ಜೊತೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಮೈತ್ರಿ ಸರ್ಕಾರಕ್ಕೆ ಮುಂದಾದರು. ಕಾಂಗ್ರೆಸ್ ಯಾವುದೇ ಷರತ್ತು ಹಾಕದೆ ಮೈತ್ರಿಗೆ ಒಪ್ಪಿತು. ಅದರಂತೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು.  ಕುಮಾರಸ್ವಾಮಿ ನಮ್ಮ‌ ಪಕ್ಷ ಬಹುಮತ ಬಂದರೆ ರೈತರ‌ ಸಾಲಮನ್ನಾ ಮಾಡುತ್ತೇವೆ ಅಂದಿದ್ದರು, ಆದರೆ ರಾಜ್ಯದ ಜನತೆ ಅದಕ್ಕೆ ಬೆಂಬಲ‌ ನೀಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ. ರೈತರ ಸಾಲಮನ್ನಾ ಮಾಡಬೇಕಾದರೆ ಕಾಂಗ್ರೆಸ್ ನಾಯಕರ ಬೆಂಬಲ‌ ಪಡೆಯಬೇಕಿದೆ ಎಂದರು.

ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಬಂದ್ ಗೆ ಕರೆ‌ ನೀಡಿದ್ದರು. ಆದರೆ, ಇವರು ಕರೆ ನೀಡಿದ್ದ ಬಂದ್ ಗೆ ರೈತರೇ ಬೆಂಬಲ ನೀಡಲಿಲ್ಲ. ಈಗ ಮತ್ತೆ ಕುಮಾರಸ್ವಾಮಿ ರೈತರ‌ ಸಾಲ ವಿಚಾರ ಬಗ್ಗೆ ಅಂತಿಮ‌ ನಿರ್ಧಾರ ತಗೆದುಕೊಳ್ಳುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಪ್ರಣಾಳಿಕೆಯಲ್ಲಿನ ಅಂಶಗಳನ್ನ ಈಡೇರಿಸುತ್ತಾರೆ. ಆದರೆ, ಅದಕ್ಕೆ ಕಾಲಾವಕಾಶ ಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

GT Devegowda H.D.Kumaraswamy ಪ್ರಣಾಳಿಕೆ ಕಾಲಾವಕಾಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ