ನ್ಯಾಮಗೌಡ ಜನರ ಮನದಲ್ಲಿ ಚಿರಸ್ಥಾಯಿ: ಸಿದ್ದರಾಮಯ್ಯ

Ex cm siddaramaiah condolence to siddu nyamagouda

29-05-2018

ಬಾಗಲಕೋಟೆ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಸಾವು ದೊಡ್ಡ ಆಘಾತ ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ನ್ಯಾಮಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ, ಇಡೀ ಸಮಾಜ ಸ್ಮರಿಸುವಂತಹ ಕೆಲಸ ಮಾಡಿದ್ದಾರೆ. ಅವರ ಸಾವಿನಿಂದ ಹೆಚ್ಚು ಜನ ದುಃಖ ತಪ್ತರಾಗಿದ್ದಾರೆ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಪ್ರತಿಯೊಬ್ಬರು ಹುಟ್ಟಿದ ಮೇಲೆ ಸಾಯಲೇಬೇಕು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕೆಲಸ ಮಾಡಿ ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ನುಡಿದರು.

ನನ್ನ ಬಳಿ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದರು, ಇನ್ನು ಮೂರು ನಾಲ್ಕು ದಿನ ಆಗುತ್ತೆ ಹೋಗಿ ಎಂದಿದ್ದೆ, ಆಗ ಬಹಳ ಆರೋಗ್ಯವಾಗಿದ್ದರು. ಅವರ ಜೀವನದ ಧೀರ್ಘಕಾಲ ರಾಜಕೀಯದಲ್ಲೇ ಇದ್ದರು, ಬ್ಯಾರೇಜ್ ಸಿದ್ದು ಅಂತಾನೆ ಹೆಸರಾಗಿದ್ದವರು ಎಂದು ನೆನೆಪಿಸಿಕೊಂಡರು.

ಇದೇ ವೇಳೆ ಗದಗದ ತೋಂಟದಾರ್ಯ ಶ್ರೀಗಳು ಸಂತಾಪ ಸೂಚಿಸಿ, ಇದೊಂದು ಅಸಹನೀಯ ದುಃಖದ ಪ್ರಸಂಗ. ನ್ಯಾಮಗೌಡ ಅವರದ್ದು ಸಾಯುವ ವಯಸ್ಸಲ್ಲ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅಂತಾರೆ, ಅದೇ ರೀತಿ ಸಿದ್ದು ನ್ಯಾಮಗೌಡ ಕೃಷಿಗೆ ಆದ್ಯತೆ ನೀಡಿದವರು. ರಾಮಕೃಷ್ಣ ಹೆಗಡೆ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅವರ ಅಗಲಿಕೆ ನೋವು ತಂದಿದೆ. ರಾಜಕಾರಣಿಗಳು ಜನಪರವಾದ, ಕೃಷಿಕರ ಅನುಕೂಲಕರ ಕೆಲಸ ಮಾಡಬೇಕು ಅದುವೆ ಸಿದ್ದು ನ್ಯಾಮಗೌಡ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah siddu nyamagouda ಧೀರ್ಘಕಾ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ