ಮೆಕುನು ಎಫೆಕ್ಟ್: ಕರಾವಳಿಯಲ್ಲಿ ಆತಂಕದ ಛಾಯೆ!

Mekunu effect: high waves at karavali sea belt

29-05-2018

ಉಡುಪಿ: ಗಲ್ಫ್ ರಾಷ್ಟ್ರಗಳನ್ನು‌ ಬೆಚ್ಚಿಬೀಳಿಸಿರುವ ‘ಮೆಕುನು’ ಚಂಡಮಾರುತದ ಎಫೆಕ್ಟ್ ರಾಜ್ಯ ಕರಾವಳಿಗೆ ಆವರಿಸುವ ಆತಂಕ ಮೂಡಿದೆ. ದಿನದಿಂದ ದಿನಕ್ಕೆ ಕಡಲ ಅಲೆಗಳ ರಭಸ ಮೇಲೇರುತ್ತಿದೆ. ಸುಮಾರು 500ಮೀ. ದೂರದಿಂದಲೇ ಅಲೆಗಳು ಮೇಲೇರಿ ಬರುತ್ತಿವೆ. ಕಡಲಿನ ಅಬ್ಬರದ ಅಲೆಗಳನ್ನು ಕಂಡು ಮೀನುಗಾರರು, ಕಡಲ ತಡಿ ಜನ ಭೀತಿಗೊಂಡಿದ್ದಾರೆ. ಕಾಪು, ಮಲ್ಪೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವುದು ವರದಿಯಾಗಿದೆ. ಭಾರೀ ಗಾಳಿಗೆ ಸಮುದ್ರದ ಅಲೆಗಳ ರೌದ್ರ ನರ್ತನ ಭಯ ಹುಟ್ಟಿಸುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಮುದ್ರದಲ್ಲಿ ಭಾರೀ ಬದಲಾವಣೆಯಾಗಿದೆ. ಒಟ್ಟಾರೆ ಕರಾವಳಿಯಲ್ಲಿ ಆತಂಕದ ಛಾಯೆ ಮೂಡಿದೆ.


ಸಂಬಂಧಿತ ಟ್ಯಾಗ್ಗಳು

Mekunu costal ಇಳಿಮುಖ ಬದಲಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ