ಯಾರನ್ನೂ ನೆಮ್ಮದಿಯಿಂದಿರಲು ದೇವೇಗೌಡರು ಬಿಡಲ್ಲ: ವಿ.ಸೋಮಣ್ಣ

Mla V.somanna v/s H.D.Deve Gowda

29-05-2018

ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ‌ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ‌ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ‘ನಾನೂ ಕೂಡಾ ದೇವೇಗೌಡರ ಗರಡಿಯಲ್ಲಿ ಬೆಳೆದವನು. ಅವರು ಯಾರಿಗೂ ನೆಮ್ಮದಿಯಿಂದ ಇರಲು ಬಿಡಲ್ಲ’. ‘ಕುಮಾರಸ್ವಾಮಿ ಸೇರಿದಂತೆ ಯಾರನ್ನೂ ನೆಮ್ಮದಿಯಿಂದ ಇರಲು‌ ಬಿಡಲ್ಲ, ಅವರದೇ ಸ್ಟೈಲಲ್ಲಿ ಅವರು ರಾಜಕೀಯ ಮಾಡುತ್ತಾರೆ' ಎಂದರು. ಕಾಂಗ್ರೆಸ್ ನವರು ನಿರಾಯುಧರಾಗಿದ್ದಾರೆ. ಒಂದು ರಾಷ್ಟ್ರೀಯ ಪಕ್ಷ ಒಬ್ಬ ಯಡಿಯೂರಪ್ಪ ಅವರನ್ನು ಸೋಲಿಸಲು ದೇವೇಗೌಡರ ಜೊತೆ ಸೇರಿ ನಿರಾಯುಧರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಮಗೂ ಕಳವಳ ಹುಟ್ಟಿಸಿದೆ. ಬೆಲೆ ನಿಯಂತ್ರಣಕ್ಕೆ ಚಿಂತನೆ ನಡೆದಿದೆ, ಬೆಲೆ ಏರಿಕೆ ಒಳ್ಳೆ ಬೆಳವಣಿಗೆ ಅಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲಿದೆ ಎಂಬ ವಿಶ್ವಾಸವಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

V.somanna H.D.Deve Gowda ಮಾಧ್ಯಮ ಕುಮಾರಸ್ವಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ