ಐಷಾರಾಮಿ ಜೀವನಕ್ಕಾಗಿ ಕಳ್ಳ ದಾರಿ ಹಿಡಿದ ಎಂಜಿನಿಯರ್

online fraud: police arrested A engineer

28-05-2018

ಬೆಂಗಳೂರು: ವೆಬ್‍ ಸೈಟ್‍ಗಳ ಹುಡುಕಾಟ ನಡೆಸಿ ದುಬಾರಿ ಬೆಲೆಯ ಕ್ಯಾಮೆರಾಗಳು ಲೆನ್ಸ್ಗಳನ್ನು ಬಾಡಿಗೆ ಪಡೆದು ಅವುಗಳನ್ನು ಓಎಲ್‌ಎಕ್ಸ್‌ ನಲ್ಲಿ ಮಾರಾಟ ಮಾಡಿ ಜೂಜಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ ಅಂತರರಾಜ್ಯ ವಂಚಕ ಎಂಜಿನಿಯರ್ ಒಬ್ಬನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಕಾರ್ತಿಕ್(27) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 12 ಲಕ್ಷ 3 ಸಾವಿರ ಮೌಲ್ಯದ 2 ಕ್ಯಾಮೆರಾ ಹಾಗೂ ಲೆನ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಿಗೆಹಳ್ಳಿಯ ಲೋಹಿತ್ ಸೊಂಟಕಿ ಎಂಬುವರು ರೆಂಟ್ ಶ್ರೀ ಡಾಟ್‍ಕಾಮ್ ನಲ್ಲಿ ಬಾಡಿಗೆ ಕೊಡುವುದಾಗಿ ಹಾಕಿದ್ದ 2ಲಕ್ಷ 76 ಸಾವಿರ ಬೆಲೆಯ ಕ್ಯಾನನ್ ಡಿಜಿಟಲ್ ಕ್ಯಾಮೆರಾ ಹಾಗೂ 1ಲಕ್ಷ 38 ಸಾವಿರ ಬೆಲೆಯ ಡಿಎಸ್‍ಎಲ್‍ಆರ್ ಕ್ಯಾಮೆರಾಗಳನ್ನು ಕಳೆದ ಮಾರ್ಚ್ 21ರಂದು 3ಸಾವಿರಕ್ಕೆ ಬಾಡಿಗೆಗೆ ಪಡೆದಿದ್ದ ಆರೋಪಿಯು ಅವುಗಳನ್ನು ಓಎಲ್‌ಎಕ್ಸ್‌ ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿ ತಲೆ ಮರೆಸಿಕೊಂಡಿದ್ದನು.

ಈ ಸಂಬಂಧ ಪ್ರಕರಣ ದಾಖಲಿಸಿದ ಸಂಪಿಗೆಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಆಂಜನಮೂರ್ತಿ ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂದಿಸಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

ಇದಲ್ಲದೇ ಮುಂಬಯಿಯ ಪಶ್ಚಿಮ ಠಾಣೆ ಹಾಗೂ ಪಶ್ಚಿಮ ಬಂಗಾಳದ ಹೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ 12 ಲಕ್ಷ 3 ಸಾವಿರ ಮೌಲ್ಯದ 2 ಕ್ಯಾಮೆರಾ ಹಾಗೂ ಲೆನ್ಸ್ಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

camara lense ಈಶಾನ್ಯ ಕಲಾ ಕೃಷ್ಣಸ್ವಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ