ಮಚ್ಚು-ಲಾಂಗು ಹಿಡಿದು ಕಂಡ ಕಂಡವರ ಮೇಲೆ ಹಲ್ಲೆ!

2 rowdy Gang

28-05-2018

ಬೆಂಗಳೂರು: ಕಾಡುಗೊಂಡನಹಳ್ಳಿಯ ಗೋವಿಂದಪುರ ರಸ್ತೆಯಲ್ಲಿ ನಿನ್ನೆ ರಾತ್ರಿ ಮಚ್ಚು-ಲಾಂಗು ಹಿಡಿದ ಪುಡಿ ರೌಡಿಗಳ ಗ್ಯಾಂಗ್‍ ಒಂದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮುಜೀಬ್, ಬುರ್ಹಾನ್, ಅಯಾಜ್ ಮತ್ತು ಬಶೀರ್ ಸೇರಿ ಆರು ಮಂದಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ಮೂರು ದಿನಗಳಿಂದ ಎರಡು ರೌಡಿ ಗ್ಯಾಂಗ್‍ಗಳ ನಡುವೆ ನಡೆಯುತ್ತಿದ್ದ ಗ್ಯಾಂಗ್‍ವಾರ್ ಜನರ ಮೇಲೆ ಹಲ್ಲೆಗೆ ಕಾರಣವಾಗಿದೆ. ವಸೀಂ, ಬಿಲಾಲ್, ಮೋಸಿನ್ ಒಂದು ಗ್ಯಾಂಗ್. ತೌಫಿಕ್ ಅಲಿಯಾಸ್ ಚಪ್ಡಿ ಮತ್ತು ಇತರ ಮೂವರು ಮತ್ತೊಂದು ಗ್ಯಾಂಗ್ ಕಳೆದ ಮೂರು ದಿನಗಳಿಂದ ಕೆ.ಜಿ ಹಳ್ಳಿಯ ಲಿಮಿಟ್ಸ್ ಗೋವಿಂದಪುರ ಬಳಿ ರಸ್ತೆಯಲ್ಲಿ ರಾತ್ರಿ 10ರ ವೇಳೆ  ಲಾಂಗು ಮಚ್ಚುಗಳಿಂದ ಜನರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ.

ಮಚ್ಚುಲಾಂಗ್ ಹಿಡಿದು ರಸ್ತೆಗಿಳಿದಿದ್ದ ದುಷ್ಕರ್ಮಿಗಳು ರಸ್ತೆಯಲ್ಲಿ ಕಂಡ ಕಂಡವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಜಿ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy gang war ಗ್ಯಾಂಗ್ ಚಿಕಿತ್ಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ