ಶಾಲಾ ಬಸ್ ಅಪಘಾತ: ಅದೃಷ್ಟವಶಾತ್ ಮಕ್ಕಳು ಸೇಫ್

Tata sumo-school van accident

28-05-2018

ಬೆಂಗಳೂರು: ನಗರದ ಹೊರವಲಯದ ಸರ್ಜಾಪುರ ರಸ್ತೆಯ ವಿ.ಕಲ್ಲಹಳ್ಳಿ ಬಳಿ ಬಳಿಗ್ಗೆ ಶಾಲಾ ಬಸ್ ಮತ್ತು ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಭಾರೀ ಅನಾಹುತ ತಪ್ಪಿದೆ. ಶಾಲಾ ಬಸ್ ನಲ್ಲಿ ಸುಮಾರು ಹತ್ತು ಜನ ವಿದ್ಯಾರ್ಥಿಗಳಿದ್ದರು. ಟಾಟಾ ಸುಮೋದಲ್ಲಿ ನಾಲ್ವರಿದ್ದರು. ಶಾಲಾ ಬಸ್ ಮತ್ತು ಟಾಟಾ ಸುಮೋ ಸರ್ಜಾಪುರ ರಸ್ತೆಯ ವಿ.ಕಲ್ಲಹಳ್ಳಿ ಬಳಿ ಬರುತ್ತಿದ್ದಂತೆಯೇ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಅಪಘಾತದ ರಭಸಕ್ಕೆ ಶಾಲಾ ಬಸ್ ಮತ್ತು ಟಾಟಾ ಸುಮೋ ಎರಡು ವಾಹನಗಳ ಮುಂಭಾಗ ಜಖಂ ಆಗಿವೆ. ಘಟನೆ ನಡೆದ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident school bus ಹೊರವಲಯ ವಿದ್ಯಾರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ