ಥೈಲ್ಯಾಂಡ್ ದೊರೆಗೆ ಕ್ರಾಪ್ ಟಾಪ್ ಪೀಕಲಾಟ

Kannada News

24-05-2017

ಥೈಲ್ಯಾಂಡ್ ನಲ್ಲಿ ಜನರು ಫೇಸ್‍ಬುಕ್ ಬಳಸೋಕೆ ಹಿಂದೆ ಮುಂದೆ ನೋಡುವಂತಾಗಿದೆ. ಅರೆ.. ಸಾಮಾಜಿಕ ಜಾಲತಾಣ ಫೇಸ್‍ಬುಕ್ ಬಳಸೋಕೆ ಯಾಕೆ ಜನ ಭಯಪಡ್ತಿದ್ದಾರೆ ಅಂದ್ಕೊಂಡ್ರಾ.. ಇದಕ್ಕೆ ಕಾರಣ ಥೈಲ್ಯಾಂಡ್ ಕಿಂಗ್ ಮಹಾ ವಜಿರಾಲೊಂಕೋರ್ನ್ ಅವರ ಹೊಸ ಅವತಾರ. ವಜಿರಾಲೊಂಕೋರ್ನ್ ಗೆ ಅದೇನಾಗಿತ್ತೋ ಗೊತ್ತಿಲ್ಲ, ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಇದ್ರೂ ಇರಬಹುದು.

ಯುವತಿಯರು ಧರಿಸುವಂತಹ ಕ್ರಾಪ್ ಟಾಪ್ ಹಾಕಿಕೊಂಡು ಶಾಪಿಂಗ್ ಗೆ ಹೊರಟು ಬಿಟ್ಟಿದ್ರು. ಮೈತುಂಬಾ ಟ್ಯಾಟೂ, ಅಚ್ಚ ಬಿಳಿಯ ಕ್ರಾಪ್ ಟಾಪ್ ಧರಿಸಿ ಮಹಿಳೆಯೊಬ್ಬಳ ಜೊತೆಗೆ ಕಿಂಗ್ ಕಾಣಿಸಿಕೊಂಡಿದ್ದಾರೆ. ಥೈಲ್ಯಾಂಡ್ ರಾಜನ ಈ ವಿಚಿತ್ರ ಗೆಟಪ್ ನೋಡಿದ್ದೇ ತಡ ಯಾರೋ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಕೆಲಹೊತ್ತಿನಲ್ಲೇ ಥೈಲ್ಯಾಂಡ್ ಕಿಂಗ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ದೊರೆ ನಗೆಪಾಟಲಿಗೀಡಾಗಬಹುದು ಅನ್ನೋ ಆತಂಕ ಅಧಿಕಾರಿಗಳಿಗೆ. ಹಾಗಾಗಿ ಕೂಡಲೇ ಸಾಮಾಜಿಕ ತಾಣಗಳಿಂದ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಹಾಕುವಂತೆ ‘ಥಾಯ್ ಅಂತರ್ಜಾಲ ಸೇವಾ ಪೂರೈಕೆದಾರರ ಸಂಘ’ ಸೂಚನೆ ನೀಡಿತ್ತು.

ಇಲ್ಲದೇ ಇದ್ದಲ್ಲಿ ಫೇಸ್ಬುಕ್ ಸರ್ವರ್ ಅನ್ನೇ ಡಿಸ್ಕನೆಕ್ಟ್ ಮಾಡೋದಾಗಿ ಎಚ್ಚರಿಸಿತ್ತು. ಆದೇಶ ಪಾಲಿಸದೇ ಇದ್ದಲ್ಲಿ ದೇಶದ ರಾಜನಿಗೆ ಅವಮಾನ ಮಾಡಿದ ಆರೋಪದಲ್ಲಿ 15 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿತ್ತು. ಥಾಯ್ ದೊರೆಯ ವಿಚಿತ್ರ ಅವತಾರವುಳ್ಳ ಒಂದೇ ಒಂದು ಫೇಸ್ಬುಕ್ ಪೇಜ್ ಹಾಗೇ ಉಳಿದುಕೊಂಡ್ರೂ ಥೈಲ್ಯಾಂಡ್ ಫೇಸ್ಬುಕ್ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಪ್ರಸಾರ ಮತ್ತು ದೂರ ಸಂಪರ್ಕ ಆಯೋಗದ ಮುಖ್ಯಸ್ಥರು ಕಠಿಣ ಎಚ್ಚರಿಕೆ ನೀಡಿದ್ದರು.

ಅಷ್ಟೇ ಅಲ್ಲ ವಿಡಿಯೋವನ್ನು ತೆಗೆದುಹಾಕುವಂತೆ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಗೆ ಕೂಡ ಪತ್ರ ಬರೆಯಲಾಗಿದೆ. ಎಷ್ಟೇ ಸರ್ಕಸ್ ಮಾಡಿದ್ರೂ ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಂತೆ ತಡೆಯಲು ಸಾಧ್ಯವಾಗಿಲ್ಲ. ಸಾಮಾಜಿಕ ತಾಣಗಳಲ್ಲಿ ಅದು ಸದ್ದು ಮಾಡ್ತಾನೇ ಇದೆ. ಈ ಫೋಟೋವನ್ನು ಯಾರೂ ನೋಡಬಾರದೆಂದು ಆದೇಶ ಹೊರಡಿಸಿರೋ ಥಾಯ್ ಸರ್ಕಾರ ಅಂಥವರನ್ನು ರಾಜನಿಗೆ ಅಪಮಾನ ಮಾಡಿದ ಕಾಯ್ದೆಯಡಿ ಬಂಧಿಸೋದಾಗಿ ಹೇಳಿದೆ.

ಥಾಯ್ ದೊರೆ ಈ ರೀತಿ ಚಿತ್ರ ವಿಚಿತ್ರ ಬಟ್ಟೆ ಧರಿಸಿರೋದು ಇದೇ ಮೊದಲೇನಲ್ಲ. ಕಳೆದ ಅಕ್ಟೋಬರ್ ನಲ್ಲಿ ಟ್ಯಾಂಕ್ ಟಾಫ್, ಜೀನ್ಸ್ ಹಾಗೂ ನಕಲಿ ಟ್ಯಾಟೂ ಜೊತೆಗೆ ಮುನಿಚ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ರು. 64ರ ಹರೆಯದ ಕಿಂಗ್ ಮಹಾ ವಜಿರಾಲೊಂಕೋರ್ನ್ ಅವರಿಗೆ ಕಳೆದ ಡಿಸೆಂಬರ್ ನಲ್ಲಿ ಪಟ್ಟಾಭಿಷೇಕ ಮಾಡಲಾಗಿತ್ತು. ಆದ್ರೆ ವಜಿರಾಲಂಕೋರ್ನ್ ಗೆ ಅವರ ತಂದೆಯಾದ ಭೂಮಿಬೌಲ್ ಅದುಲ್ಯತೇಜ್ ಬಗ್ಗೆ ಅಪಾರ ಗೌರವವಿತ್ತು. ಅಂದಹಾಗೆ ವಜಿರಾಲೊಂಕೋರ್ನ್ ಅನ್ನೋದ್ರ ಅರ್ಥ ವಜ್ರಾಲಂಕರಣ ಎಂದು ಅನ್ನೋದು ಸುಪರ್ ಸುದ್ದಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದ್ದು, ಥೈಲ್ಯಾಂಡ್ ಜನರಿಗೆ ಪೀಕಲಾಟ ಶುರುವಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ