ತಡವಾಗಿ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣ!

A PG Girl raped by two men!

28-05-2018

ಬೆಂಗಳೂರು: ದೀಪಾಂಜಲಿ ನಗರದ ಪಿಜಿ ಹಾಸ್ಟೆಲ್‍ವೊಂದರಲ್ಲಿ ಯುವತಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ದೀಪಾಂಜಲಿನಗರದ ಖಾಸಗಿ ಪಿಜಿಯಲ್ಲಿ ಮಾರ್ಚ್ 18ರಂದು ಆರೋಪಿ ಕಾರ್ತಿಕ್ ಮತ್ತು ಇನ್ನಿಬ್ಬರು ಯುವಕರಿಂದ ಈ ಕೃತ್ಯ ನಡೆದಿದೆ. ಈ ಕೃತ್ಯಕ್ಕೆ ಪಿಜಿಯ ಮಹಿಳಾ ಮ್ಯಾನೇಜರ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪಿಜಿಯ ಮ್ಯಾನೇಜರ್ ನನ್ನ ಬಳಿ ಇದ್ದ ಒಡವೆ ಮತ್ತು ಹಣವನ್ನು ಕಳವು ಮಾಡಿದ್ದಳು ನಾವು ಕೇಳಿದಾಗ ಕೊಡುತ್ತೇನೆ ಎಂದು ಸತಾಯಿಸುತ್ತಿದ್ದಳು. ಬಳಿಕ ಆರೋಪಿ ಕಾರ್ತಿಕ್ ಮತ್ತು ಆತನ ಸ್ನೇಹಿತರ ಜೊತೆ ಸಹಕರಿಸಿದರೆ ಹಣ, ಒಡವೆಯನ್ನು ವಾಪಸ್ ಕೊಡುವುದಾಗಿ ಹೇಳಿದ್ದಳು. ನಾನು ಅದಕ್ಕೆ ನಿರಾಕರಿಸಿದ್ದೆ. ಇದರಿಂದ ಮಾರ್ಚ್ 18ರಂದು ಮ್ಯಾನೇಜರ್ ನನ್ನ ರೂಮಿಗೆ, ಕಾರ್ತಿಕ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕಳುಹಿಸಿದ್ದಳು.

ರೂಮಿಗೆ ಬಂದ ಅವರು ನನ್ನ ಮುಖಕ್ಕೆ ಕ್ಲೋರೋಫಾರ್ಮ್ ಹಾಕಿದ ಬಟ್ಟೆಯನ್ನು ಮುಚ್ಚಿದರು. ಇದರಿಂದ ನನಗೆ ಪ್ರಜ್ಞೆ ತಪ್ಪಿತು. ಆಗ ಮೂವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ವಿಡಿಯೋವನ್ನು ಆರೋಪಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಬಳಿಕ ಆ ವಿಡಿಯೋವನ್ನು ತೋರಿಸಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಅಷ್ಟೆ ಅಲ್ಲದೇ ನಾವು ಹೇಳಿದವರ ಜೊತೆ ನೀನು ಸಹಕರಿಸಬೇಕು ಎಂದು ಹೇಳಿದ್ದಾರೆ ಅಂತ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾಮುಕರು ನೀಡುತ್ತಿದ್ದ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಇದೇ ಮೇ 23ರಂದು ಸಂತ್ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಕಾಮುಕರನ್ನು ಕರೆಸಿ ವೀಡಿಯೋ, ಫೋನ್ ಎಲ್ಲವನ್ನು ವಶಪಡಿಸಿಕೊಂಡು ಯಾವುದೇ ಕ್ರಮ ತೆಗೆದುಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಕ್ಕೆ ಕಾಮುಕರು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ನೊಂದ ಸಂತ್ರಸ್ತೆ ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ. ಸದ್ಯಕ್ಕೆ ನಗರ ಪೊಲೀಸ್ ಆಯುಕ್ತರು ಸಂತ್ರಸ್ತೆಯ ದೂರು ಸ್ವೀಕರಿಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape PG Hostel ಸಂತ್ರಸ್ತೆ ಕಾಮುಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ