ಬಾಗಲಕೋಟೆಯಲ್ಲಿ ಬಂದ್ ವಾಪಸ್!

28-05-2018
ಬಾಗಲಕೋಟೆ: ರೈತರ ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗಲಕೋಟೆಯಲ್ಲಿ ಬಸ್ ಸಂಚಾರ ಎಂದಿನಂತಿದ್ದು, ಶಾಲಾ-ಕಾಲೇಜುಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಜಮುಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆ ಬಾಗಲಕೋಟೆ ಬಿಜೆಪಿ ಬಂದ್ ವಾಪಸ್ಸು ಪಡೆದಿದೆ. ರಾಜ್ಯದ ಹಾವೇರಿ, ಚಿಕ್ಕೋಡಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಸನ, ದಕ್ಷಿಣ ಕನ್ನಡ, ಮೈಸೂರು, ಚಿತ್ರದುರ್ಗದಲ್ಲೂ ಬಂದ್ ಇಲ್ಲ, ಎಂದಿನಂತೆ ಚಟುವಟಿಕೆಯಿಂದಿವೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ