ಅಪಘಾತ: ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ...

Karnataka Congress MLA Siddu Nyamagouda dies in road accident

28-05-2018

ಬಾಗಲಕೋಟೆ: ಜಿಲ್ಲೆಯ ತುಳಸಿಗೇರಿಯ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟಿದ್ದಾರೆ. ಇಂದು ನಸುಕಿನ ಜಾವ 4.30ರ ವೇಳೆಯಲ್ಲಿ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದೆಹಲಿಯಿಂದ ವಾಸಾಗುತ್ತಿದ್ದ ಇವರು, ದೆಹಲಿಯಿಂದ ವಿಮಾನದ ಮೂಲಕ ಗೋವಾದ ಪಣಜಿ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಇನ್ನೋವಾ ಕಾರಿನಲ್ಲಿ ಜಮಖಂಡಿಗೆ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಅಪಘಾತದಿಂದ ತೀವ್ರ ಗಾಯಗಳಿಂದ ಪ್ರಜ್ಞೆಹೀನ ಸ್ಥತಿಯಲ್ಲಿದ್ದ ನ್ಯಾಮಗೌಡರನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 6.15ಕ್ಕೆ ಸಾವಿಗೀಡಾಗಿದ್ದಾರೆ. ಕಾರಿನ ಚಾಲಕ ಪರಮಾನಂದ ಅಂಬಿ(27) ಅನ್ವರ್ ಮೋಮಿನ್, (45) ಮೌಲಾನಾ ರಜವಿ(54), ಅಬ್ದುಲ್ ರಶೀದ್ (72) ಸ್ಥತಿ ಗಂಭೀರವಾಗಿದೆ.

 


ಸಂಬಂಧಿತ ಟ್ಯಾಗ್ಗಳು

Siddu Nyamagouda Accident ಅಪಘಾತ ಜಮಖಂಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ