ಕಚೇರಿಗೆ ನುಗ್ಗಿ ಕಂಪ್ಯೂಟರ್ ಗಳ ಕಳ್ಳತನ

computers theft at commercial tax office building

26-05-2018

ಮಂಡ್ಯ: ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡಕ್ಕೆ ಕಳ್ಳರು ಕನ್ನ ಹಾಕಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಿಕ್ಕಮಂಡ್ಯ ಕೆರೆ ಅಂಗಳದಲ್ಲಿರು ಕಚೇರಿಗೆ ನುಗ್ಗಿರುವ ಕಳ್ಳರು, ಕಚೇರಿಯಲ್ಲಿದ್ದ 30ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಕದ್ದೊಯ್ದಿದ್ದಾರೆ. ಕಚೇರಿಯ ಅನುಪಯುಕ್ತ ಬಾಗಿಲು ಮುರಿದು, ನಾಲ್ಕು ರೂಂಗಳಲ್ಲಿ ಇರಿಸಿದ್ದ ಕಂಪ್ಯೂಟರ್‌‌ಗಳು, ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನೆಡಸಿದ್ದಾರೆ. ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Tax office robbery ಹಿರಿಯ ಕಂಪ್ಯೂಟರ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ