‘ವಿಪಕ್ಷಗಳೆಲ್ಲಾ ಒಂದಾದರೂ ಆತಂಕ ಇಲ್ಲ’- ಷಾ

opposition parties together at karnataka: amith shah reaction

26-05-2018

ನವದೆಹಲಿ: ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ವೇದಿಕೆಯಲ್ಲಿ ನೆರೆದಿದ್ದ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರುಗಳು, ರಾಷ್ಟ್ರ ರಾಜಕೀಯದ ನಾಯಕರುಗಳು ಸೇರಿದ್ದ ವೇದಿಕೆ ತೃತೀಯ ರಂಗದ ವಿಚಾರವನ್ನು ಮುನ್ನೆಲೆಗೆ ತಂದಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಕೇಂದ್ರ ಬಿಜೆಪಿ ವಿರುದ್ಧ ಎಂದು ಬಿಂಬಿಸಲಾದ ವಿಪಕ್ಷಗಳ ಬಲ ಪ್ರದರ್ಶನ ವಿಚಾರವಾಗಿ, ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಕ್ರಿಯಿಸಿದ್ದಾರೆ.

ಎಲ್ಲಾ ವಿಪಕ್ಷಗಳು ಒಂದಾಗಿರುವ ಬಗ್ಗೆ ನಮಗೇನು ಆತಂಕ ಇಲ್ಲ, 2014ರ ಲೋಕಸಭೆಯಲ್ಲೂ ನಮ್ಮ ವಿರೋಧ ಚುನಾವಣೆ ಎದುರಿಸಿದರು. ಈಗಲೂ ನಮ್ಮ ವಿರುದ್ಧ ಚುನಾವಣೆಗೆ ಬರಲಿದ್ದಾರೆ. ಎಲ್ಲರೂ ಒಂದಾದರೂ ಸಹ ಅದು ರಾಜಕೀಯ ಪರಿಣಾಮ ಬೀರದು ಎಂದರು. ಕುಮಾರಸ್ವಾಮಿ, ಸೀತಾರಾಂ ಯೆಚೂರಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಒಂದಾದರೆ ಏನು ಲಾಭ, ಇದರಿಂದ ನಮಗೇನೂ ‌ನಷ್ಟ ಇಲ್ಲ. ಆಯಾ ರಾಜ್ಯಗಳ ಚುನಾವಣೆಯಲ್ಲಿ ಆಯಾ ನಾಯಕರನ್ನು ಈಗಾಗಲೇ ಎದುರಿಸಿದ್ದೇವೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ