ಪತ್ನಿ ಕೊಲೆ ಮಾಡಿ ಕಟ್ಟು ಕಥೆ ಹೆಣೆದ ಪತಿ

Husband killed his own wife

26-05-2018

ಬಳ್ಳಾರಿ: ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಾಟಕ ವಾಡುತ್ತಿದ್ದ ಪಾಪಿ ಪತಿಯ ತೀವ್ರ ವಿಚಾರಣೆ ನಂತರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಳ್ಳಾರಿ ತಾಲ್ಲೂಕಿನ ಶಿಡಿಗಿನಮೋಳ ಗ್ರಾಮದ ನಿವಾಸಿ, ರಾಮಚಂದ್ರ (25) ಈ ಕೃತ್ಯ ಎಸಗಿದ್ದಾರೆ. ದಿವ್ಯಾಂಗಳಾಗಿದ್ದ ಪತ್ನಿ ಸುನೀತಾ(20) ಕೊಲೆಯಾದ ಮಹಿಳೆ. ನಿನ್ನೆ ರಾತ್ರಿ ಮಲಗಿದ್ದಾಗ ಸುನೀತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರದಲ್ಲಿ ಡ್ರಾಮಾ ಶುರುವಿಟ್ಟುಕೊಂಡ ಈತ, ಮೂವರು ಕಳ್ಳರು ಬಂದು ತನ್ನ ಹೆಂಡತಿಯನ್ನು ಕೊಲೆ ಮಾಡಿ ಓಡಿ ಹೋಗಿದ್ದಾರೆ ಎಂದು ಕಥೆ ಹೆಣೆದಿದ್ದಾನೆ. ಆದರೆ ಈತನ ಹೇಳಿಕೆಗಳು ಅನುಮಾನ ಉಂಟುಮಾಡಿದ್ದು, ಪೊಲೀಸರ ತೀವ್ರ ವಿಚಾರಣೆಯಿಂದ ತಾನು ಮಾಡಿದ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಆದರೆ, ಮೃತ ಸುನೀತಾ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murder wife ಕತ್ತು ಹಿಸುಕಿ ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ