ಸಿಡಿಲು ಬಡಿದು ಮಹಿಳೆ ಸಾವು

heavy thunder lightning Rain: a woman died

26-05-2018

ದಕ್ಷಿಣ ಕನ್ನಡ: ಮೂಡಬಿದಿರೆ ಬಳಿಯ ನೆಲ್ಲಿಕಾರು ಎಂಬಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಾವಿತ್ರಿ ರಾಥೋಡ್(48) ಸಿಡಿಲಿಗೆ ಬಲಿಯಾದ ಮಹಿಳೆ. ನಿನ್ನೆ ಸುರಿದ ಭಾರೀ ಗುಡುಗು ಸಹಿತ ಮಳೆಯಲ್ಲಿ ಸಿಡಿಲು ಮಿಂಚು ಅಬ್ಬರಿಸಿದೆ. ಈ ವೇಳೆ ಸಾವಿತ್ರಿ ಮತ್ತು ಅವರ ಪತಿಗೆ ತಡರಾತ್ರಿ ಸಿಡಿಲು ಬಡಿದಿದೆ. ಸಾವಿತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಸ್ಥಿತಿಯೂ ಗಂಭೀರವಾಗಿದೆ. ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Rain lightining ಆಸ್ಪತ್ರೆ ಗಂಭೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ