ಉಪ ನೋಂದಣಾಧಿಕಾರಿಯ ಲಂಚಾವತಾರ ವೈರಲ್!

Bidar: Deputy Registrar

25-05-2018

ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ಉಪ ನೋಂದಣಾಧಿಕಾರಿ ಲಂಚ ಪಡೆಯುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಟಗೇಜ್ (ಅಡಮಾನ) ಮಾಡಲು ರೈತರಿಂದ ಸಾವಿರಾರು ರೂ. ಲಂಚ ಪಡೆಯುತ್ತಿರುವ ಉಪನೋಂದಣಾಧಿಕಾರಿ ಹಗಲು ದರೋಡೆ ಮಾಡುತ್ತಿರುವುದು ಬಯಲಾಗಿದೆ. ಸರ್ಕಾರಿ ನಿಯಮದಂತೆ ಮಾರ್ಟಗೇಜ್ ಗೆ 175 ರೂ. ಪಡೆಯಬೇಕು, ಆದರೆ ರೈತರಿಂದ ಸಾವಿರದಿಂದ ಎರಡು ಸಾವಿರ ರೂ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇದು ಮುಂಗಾರಿನ ಸಮಯವಾದ್ದರಿಂದ ರೈತರ ಬಿತ್ತನೆಯ ಕಾರ್ಯಕ್ಕೆ ಹಣ ಬೇಕು, ಬ್ಯಾಂಕಿನಿಂದ ಸಾಲ ಪಡೆಯಬೇಕಾದರೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಮಾರ್ಟಗೇಜ್ ಮಾಡಿಸಬೇಕು, ಇದರ ದುರುಪಯೋಗ ಪಡೆದುಕೊಂಡ ಅಧಿಕಾರಿ ಮಾಣಿಕಪ್ಪ ಜಿರ್ಗಾ ಲಂಚ ಪಡೆಯುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ  ಒತ್ತಾಯಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bribe social media ಮಾರ್ಟ್ಗೇಜ್ ಔರಾದ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ