ವದಂತಿಗೆ ಕಂಗೆಟ್ಟು ಸಿಕ್ಕಸಿಕ್ಕವರ ಮೇಲೆ ಹಲ್ಲೆ!

Rumours about child abduction: increasing assault incidents

25-05-2018

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚುತ್ತಿದ್ದು, ಕೂಲಿ ಅರಸಿ ಬರುವ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿ ಮಕ್ಕಳ ಕಳ್ಳತನಕ್ಕೆ ಬಂದಿದ್ದಾರೆಂದು ಮೂವರು ಮಹಿಳೆಯರ ಮೇಲೆ ಮುಗಿಬಿದ್ದ ಸಾರ್ವಜನಿಕರು ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಡೆರಳ್ಳಿ ಬಳಿಯ ಲಕ್ಷ್ಮೀಪುರ ಕ್ರಾಸ್ ಬಳಿ ಮಹಿಳೆಯರು ಗಲ್ಲಿಗಲ್ಲಿಗಳಲ್ಲಿ ಪ್ರತ್ಯೇಕವಾಗಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸಾರ್ವಜನಿಕರು ಹಲ್ಲೆ ನಡೆಸಿ  ಮಹಿಳೆಯರನ್ನು ವಿದ್ಯಾರಣ್ಯಪುರ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದಾಗ, ಬಾಡಿಗೆ ಮನೆ ಹುಡುಕುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಟ್ಯಾನರಿ ರಸ್ತೆ, ಪುಲಿಕೇಶಿನಗರ, ಶಿವಾಜಿನಗರದಲ್ಲೂ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು, ಬಿಹಾರ ಮೂಲದ ವ್ಯಕ್ತಿಯೊಬ್ಬರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಫ್ರೆಜರ್ ಟೌನ್ ರೈಲ್ವೆ ಟ್ರ್ಯಾಕ್ ಬಳಿ ಮಕ್ಕಳನ್ನು ಅನುಮಾನಾಸ್ಪದವಾಗಿ ಕರೆದೊಯ್ಯುತ್ತಿದ್ದರು ಎಂದು ಸ್ಥಳೀಯರು ಜನ ಆರೋಪಿಸಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿ ಮತ್ತು ಜೊತೆಯಲ್ಲಿದ್ದ ಇಬ್ಬರು ಮಹಿಳೆಯನ್ನು ಪುಲಿಕೇಶಿನಗರ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ಮುಂದುವರಿದಿದೆ.

ಮಕ್ಕಳ ಕಳ್ಳರು ಸಿಕ್ಕಿದ್ದಾರೆ ಎಂಬ ವದಂತಿ ವಿಚಾರ ತಿಳಿಯುತ್ತಿದ್ದಂತೆ ಜನ ಬೀದಿಗಿಳಿದರು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ವ್ಯಕ್ತಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರನ್ನು ಪುಲಿಕೇಶಿನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಕೂಲಿಗಾಗಿ ಬೆಂಗಳೂರಿಗೆ ಬಂದ ಬಿಹಾರ ಮೂಲದವರು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.


ಸಂಬಂಧಿತ ಟ್ಯಾಗ್ಗಳು

Rumours abduction ಅನುಮಾನಾಸ್ಪದ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ