‘ಅಪ್ಪ-ಮಕ್ಕಳು ಕಾಂಗ್ರೆಸ್ ನಿರ್ನಾಮ ಮಾಡಲಿದ್ದಾರೆ’-ಬಿಎಸ್ ವೈ

yeddyurappa speech at vidhana soudha

25-05-2018

ಬೆಂಗಳೂರು: ವಿಧಾನಸಭೆಯಲ್ಲಿಂದು ಮಾತನಾಡಿದ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕುಮಾರಸ್ವಾಮಿಯವರದ್ದು ನಂಬಿದವರಿಗೆ ದ್ರೋಹ ಮಾಡುವ ಧೋರಣೆ. ಧರ್ಮಸಿಂಗ್ ಅವರಿಗೆ ದ್ರೋಹ ಮಾಡಿದ್ದರು, ಸಿದ್ದರಾಮಯ್ಯರಿಗೂ ಈಗ ಘೋರ ಅನ್ಯಾಯ ಆಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಒಂದೇ ಕಾರಣದಿಂದ ಜೆಡಿಎಸ್ ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದೀರಿ. ಕಾಂಗ್ರೆಸ್ ಮುಖಂಡರೆ‌ ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಿ, ಅಪ್ಪ ಮಕ್ಕಳು ಸೇರಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲಿದ್ದಾರೆ' ಎಂದು ಆಕ್ರೋಶದಿಂದ ನುಡಿದರು. ಹಾವಿನ ರೋಷಕ್ಕೆ 12ವರ್ಷ, ಕುಮಾರಸ್ವಾಮಿ ರೋಷ 12ವರ್ಷಕ್ಕಿಂತಲೂ ಹೆಚ್ಚು, ಕುಮಾರಸ್ವಾಮಿಯವರ ಸ್ವಭಾವವೇ ನಂಬಿದವರನ್ನು ಮುಗಿಸುವುದು ಎಂದು ಕಟುವಾಗಿ ಟೀಕಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa vidhana soudha ಹಾವಿನ ರೋಷ ವಾಗ್ದಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ