ಫೇಸ್ ಬುಕ್ ಲವ್ವಿ-ಡವ್ವಿ ಕೊಲೆಯಲ್ಲಿ ಅಂತ್ಯ!

Facebook friendship-love and murder

25-05-2018

ಶಿವಮೊಗ್ಗ: ತನ್ನ ಮಡದಿಯೊಂದಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವಕ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದು, ಈತನನ್ನು ಗಂಡನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಫೇಸ್ ಬುಕ್ ನಲ್ಲಿ ಆದ ಫ್ರೆಂಡ್ ಶಿಪ್, ಕೊಲೆಯಲ್ಲಿ ಅಂತ್ಯವಾಗಿದೆ. ಸಂಜಯ್ ಕುಮಾರ್ (28) ಕೊಲೆಯಾದ ಯುವಕ. ತನ್ನ ಹೆಂಡತಿಯೊಂದಿಗೆ ಲವ್ ಅಫೇರ್ ಇಟ್ಟುಕೊಂಡಿದ್ದ ಸಂಜಯ್ ನನ್ನು, ಪತಿ ಹರೀಶ್ ಬಾಬು (35) ಕೊಲೆ ಮಾಡಿದ್ದಾನೆ.

ಪತ್ನಿಯೊಂದಿಗಿನ ಲವ್ವಿ ಡವ್ವಿಗೆ ಬೇಸೆತ್ತ ಹರೀಶ್, ನಾಜೂಕಿನಿಂದ ಸಂಜಯ್ ನನ್ನು ಕರೆಸಿಕೊಂಡು ತನ್ನ ಇಬ್ಬರು ಸ್ನೇಹಿತರಾದ ನರಸಿಂಹಮೂರ್ತಿ ಹಾಗೂ ಸುರೇಶ್ ಜೊತೆ ಸೇರಿ ಕೊಲೆ ಮಾಡಿ, ತನ್ನದೇ ಕ್ವಾರಿಯಲ್ಲಿ ಹೂತಿಟ್ಟಿದ್ದನು.

ಮೇ 6ರಂದು ಸಂಜಯ್ ಕಾಣೆಯಾಗಿದ್ದು, ಸಂಜಯ್ ತಂದೆ ದೇವೆಂದ್ರಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 14ರಂದು ದೂರು ದಾಖಲಿಸಿ ಕೊಂಡ ಪೊಲೀಸರು  ಹರೀಶ್, ಸುರೇಶ್, ನರಸಿಂಹಮೂರ್ತಿ ಮೇಲೆ ಅನುಮಾನದಿಂದ, ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೊಲೆ ಪ್ರಕರಣ ಬಯಲಿಗೆಳೆದಿದ್ದಾರೆ. ಇಂದು ಸಂಜಯ್ ಶವ ಹೊರತೆಗೆದ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Facebook Love ಶಿಕಾರಿಪುರ ಗ್ರಾಮಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ