ರೈಲಿಗೆ ಸಿಲುಕಿ ವೃದ್ಧೆ ಸಾವು

A old lady died while crossing railway track!

25-05-2018

ಕಲಬುರಗಿ: ಹಳಿ ದಾಟಲು ಹೋಗಿ ರೈಲಿಗೆ ಸಿಲುಕಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಶಹಾಬಾದ್ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ಗೂಡ್ಸ್ ರೈಲಿಗೆ ಸಿಲುಕಿದ ಸುಮಾರು 75 ವರ್ಷದ ವಯೋವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೇವರ್ಗಿಯಿಂದ ಬಸ್ ಮೂಲಕ ಶಹಾಬಾದ್ಗೆ ಆಗಮಿಸಿರುವ ಬಗ್ಗೆ ಆಕೆಯ ಬಳಿ ಬಸ್ ಟಿಕೇಟ್ ಲಭ್ಯವಾಗಿದೆ. ಮೃತ ಅಜ್ಜಿ ಯಾರು? ಎಲ್ಲಿಯವರು? ಅನ್ನೋ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

railway track Death ಟಿಕೇಟ್ ನಿಲ್ದಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ