ಅರಣ್ಯ ರಕ್ಷಕನಿಂದಲೇ ಅರಣ್ಯ ಲೂಟಿ?

trees illegal cutting: allegation against forest officer

25-05-2018

ಮಂಡ್ಯ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಇಂಥದೊಂದು ಘಟನೆ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಸವನಕಲ್ಲು ಮೀಸಲು ಅರಣ್ಯ ಪ್ರದೇಶದ ಪಡುವಲ ಪಟ್ಟಣದಲ್ಲಿ ನಡೆದಿದೆ. ಅರಣ್ಯ ರಕ್ಷಣೆಗೆಂದು ಸರ್ಕಾರ ಅರಣ್ಯಾಧಿಕಾರಿಗಳನ್ನು ನೇಮಿಸಿ, ಅವರಿಗೆ ವೇತನ ಸಹಿತ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಹೀಗಿರುವಾಗ ಅರಣ್ಯ ಸಂರಕ್ಷಣೆ ಅವರ ಆದ್ಯ ಕರ್ತವ್ಯವೂ ಹೌದು. ಆದರೆ ಇಲ್ಲಿನ ಮೀಸಲು ಅರಣ್ಯದಲ್ಲಿ ಇದಕ್ಕೆ ತದ್ವಿರುದ್ಧದ ಘಟನೆ ಬೆಳಕಿಗೆ ಬಂದಿದೆ.

ನಾಗಮಂಗಲದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಎಂಬುವರು ಮರ ಕಡಿದು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ಮನೆ ಕಟ್ಟಲು ಮೀಸಲು ಅರಣ್ಯ ಪ್ರದೇಶದಲ್ಲಿ ಬೃಹತ್ ಮರಕ್ಕೆ ಕೊಡಲಿ ಹಾಕಿದ್ದಾರೆಂದು ಮತ್ತು ಅರಣ್ಯ ಪ್ರದೇಶದಲ್ಲಿನ ಮರಳನ್ನು ಹೊತ್ತೊಯ್ದಿದ್ದಾರೆ ಎಂದು ಪಡುವಲ ಪಟ್ಟಣ ಗ್ರಾಮದ ಅರಣ್ಯ ಸಮಿತಿ ಅಧ್ಯಕ್ಷ ಡಿಸಿಎಫ್ ಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಯೇ ಅರಣ್ಯ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Forest Trees ಅರಣ್ಯ ಇಲಾಖೆ ಮೀಸಲು ಅರಣ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ