ವಿಧಾನಸಭೆ ಸಭಾಧ್ಯಕ್ಷರಾಗಿ ರಮೇಶ್ ಕುಮಾರ್ ಆಯ್ಕೆ

KR Ramesh Kumar Elected as Vidhana Soudha Speaker

25-05-2018

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭೆ ಸಭಾಧ್ಯಕ್ಷರ ಸ್ಥಾನಕ್ಕೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್‌ ಆಯ್ಕೆ ಆಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮತ್ತು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್ ಅವರ ಅನುಮೋದನೆಯಂತೆ, ಸಭಾಧ್ಯಕ್ಷರ ಆಯ್ಕೆ ಪ್ರಸ್ತಾಪವನ್ನು ಬೋಪಯ್ಯ ಅವರು ಧ್ವನಿಮತಕ್ಕೆ ಹಾಕಿದರು. ಇದಕ್ಕೂ ಮುನ್ನ ಬಿಜೆಪಿಯ ಸುರೇಶ್‌ ಕುಮಾರ್‌ ನಾಮಪತ್ರವನ್ನು ವಾಪಸ್ಸು ಪಡೆದಿದ್ದರು. ಇದರಿಂದ ರಮೇಶ್‌ ಕುಮಾರ್‌ ಅವರ ಆಯ್ಕೆ ಹಾದಿ ಸುಗಮವಾಗಿತ್ತು.

ಧ್ವನಿಮತದ ವೇಳೆ ಬಹುತೇಕರು ರಮೇಶ್ ಕುಮಾರ್ ಪರ ಬೆಂಬಲಿಸಿದ್ದರಿಂದ ರಮೇಶ್‌ ಕುಮಾರ್‌ ಆಯ್ಕೆ ಆಗಿರುವುದನ್ನು ಘೋಷಿಸಿದರು. ಇದೇ ವೇಳೆ ನಿರ್ಗಮಿತ ಸ್ಪೀಕರ್‌ ಬೋಪಯ್ಯ, ನೂತನ ಸಭಾಧ್ಯಕ್ಷರಾದ ಕೆ.ಆರ್.ರಮೇಶ್‌ ಕುಮಾರ್ ಅವರಿಗೆ ಶುಭಕೋರಿದರು.

 


ಸಂಬಂಧಿತ ಟ್ಯಾಗ್ಗಳು

vidhana soudha speaker ಸ್ಪೀಕರ್‌ ಸಭಾಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ