ಖದೀಮನಿಗೆ ಬಿತ್ತು ಸಖತ್ ಗೂಸಾ

A Thief red handedly caught at govt hospital

25-05-2018

ಬೀದರ್: ಸರ್ಕಾರಿ ಆಸ್ಪತ್ರೆಯಲ್ಲಿ ಸಿಕ್ಕ ಸಿಕ್ಕವರ ಜೇಬಿಗೆ ಕೈ ಹಾಕಿ ಕಳ್ಳತನ ಮಾಡುತ್ತಿದ್ದ ಖದೀಮ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಬೀದರ್ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವೇಳೆ ರೋಗಿಗಳ ಸಂಬಂಧಿಗಳನ್ನು ಗುರುತಿಸಿಕೊಂಡು ಅವರ ಬಳಿಯ ಮೊಬೈಲ್, ಹಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ. ಇಂದು ಕೂಡ ತನ್ನ ಕೈಚಳಕ ತೋರಲು ಮುಂದಾಗಿ, ನಸುಕಿನ ವೇಳೆ ಮೊಬೈಲ್ ಕದಿಯುವಾಗ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ನ್ಯೂಟೌನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hospital thief ರೆಡ್ ಹ್ಯಾಂಡ್ ಹಿಗ್ಗಾಮುಗ್ಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ