‘ಡಿ.ಕೆ.ಶಿವಕುಮಾರ್ ಎಲ್ಲೂ ಅಸಮಾಧಾನಗೊಂಡಿಲ್ಲ'25-05-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮಾಸ್ಟರ್ ಮೈಂಡ್ ಡಿ.ಕೆ ಶಿಕುಮಾರ್   ಕೆಳೆದೆರಡು ದಿನಗಳ ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ಗುಮಾನಿ ಹಬ್ಬಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸ್ಪಷ್ಟನೆ ನೀಡಿ ವಿಧಾನಸೌಧದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಎಲ್ಲೂ ಅಸಮಾಧಾನಗೊಂಡಿಲ್ಲ. ನಿನ್ನೆ ತಡ ರಾತ್ರಿಯವರೆಗೆ ಅವರ ಜೊತೆ ನಾನೇ ಮಾತನಾಡಿದ್ದೇನೆ, ಅವರು ಮುನಿಸಿಕೊಂಡಿಲ್ಲ. ಎಲ್ಲವೂ ಊಹಾಪೋಹದ ಸುದ್ದಿಗಳಷ್ಟೇ. ಅವರಿಗೆ ಕೊಟ್ಟಿರುವ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.K.Shivakumar K.C.Venugopal ಊಹಾಪೋಹ ಅಸಮಾಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ