ಜೆಡಿಎಸ್ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ

CM kumaraswamy Meeting with JDS MLAs

25-05-2018

ಬೆಂಗಳೂರು: ಜೆಡಿಎಸ್ ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಇಂದು ಬೆಳಿಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನೆಡಸಿದರು. ಈ ವೇಳೆ ಜೆಡಿಎಸ್ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಷ್ಟು ದಿನಗಳ ಶ್ರಮಕ್ಕೆ ಇಂದು ಫಲ ಸಿಗುತ್ತಿದೆ. ನಿಮ್ಮನ್ನೆಲ್ಲ ಕುಟುಂಬದಿಂದ ದೂರ ಇರುವಂತೆ ಮಾಡಿದ ನೋವು ನನಗಿದೆ, ಇಂದಿನಿಂದ ಎಲ್ಲವೂ ಸರಿಯಾಗುತ್ತದೆ ಎಂದರು. ಸಚಿವ ಸ್ಥಾನ ಸಿಗದಿದ್ದವರು ಬೇಸರ ಆಗೋದು ಬೇಡ, ಯಾರನ್ನೂ ಕೈ ಬಿಡಲ್ಲ. ಪಕ್ಷಕ್ಕಾಗಿ ದುಡಿದ ಕೆಲವರು ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು ಕಂಡರು. ಅಂತಹವರಿಗೂ ಅವಕಾಶ ಮಾಡಿಕೊಡುವ ಉದ್ದೇಶ ಇದೆ. ವಿಧಾನ ಪರಿಷತ್ ಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಮುಂದಿನ ವಾರ ಚರ್ಚೆ ಮಾಡುತ್ತೇವೆ. ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ನಾನು ಆಭಾರಿ, ರೆಸಾರ್ಟ್ ರಾಜಕೀಯ ಅನಿವಾರ್ಯ ಆಯ್ತು.  ಕಷ್ಟದ ಸಂದರ್ಭದಲ್ಲಿ ಜೊತೆಯಾಗಿ ಇದ್ದುದಕ್ಕೆ ನಿಮಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

JDS Vidhana Soudha ಕೃತಜ್ಞತೆ ಕುಟುಂಬ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ