ಬೆಂಗಳೂರು ಡಿಸಿ ಪ್ರಮುಖ ಇಲಾಖೆಗಳೊಂದಿಗೆ ತುರ್ತು ಸಭೆ

nipah: Bengluru DC emergency meeting with health departments

24-05-2018

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಮೆಡಿಕಲ್ ಇನ್ಸ್‌ಟಿಟ್ಯೂಟ್, ಪೊಲೀಸ್ ಇಲಾಖೆ, ಪಶು ಸಂಗೋಪನೆ, ನರ್ಸಿಂಗ್ ಡಿಪಾರ್ಟ್‌ಮೆಂಟ್, ಕೆಎಸ್ಆರ್‌ಟಿಸಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳ ಜೊತೆಗೆ ತುರ್ತು ಸಭೆ ನಡೆಸಿದರು.

ಕೇರಳಾಗೆ ಪ್ರತಿ ದಿನ 60ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ಮಾಡುತ್ತವೆ. ಒಂದು ವೇಳೆ ಆ ಭಾಗದಲ್ಲಿ ಸಂಚಾರ ಮಾಡೋ ಬಸ್ಸುಗಳ ಸಿಬ್ಬಂದಿಗಳಿಗೆ ಹುಷಾರಿಲ್ಲದೆ ರಜೆ ಹಾಕಿದರೆ ತಮ್ಮ ಗಮನಕ್ಕೆ ತರುವಂತೆ ಕೆಎಸ್ಆರ್‌ಟಿಸಿ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಬಾವಲಿ ತಿಂದ ಹಣ್ಣಿನಿಂದ ನಿಫಾ ವೈರಸ್ ಹರಡುತ್ತದೆ, ಮಂಗಳೂರು ಭಾಗದಲ್ಲಿ ನಿಫಾ ಲಕ್ಷಣಗಳು ಕಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಹಂದಿ ಫಾರ್ಮ್‌ಗಳು, ನೀರಾ ತೆಗೆಯುವ ಕಡೆ, ಮಾರುಕಟ್ಟೆ ಮತ್ತು ಡೆಂಘಿ, ಚಿಕನ್ ಗುನ್ಯಾ, ಮಲೇರಿಯಾ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಏಪ್ರಿಲ್, ಮೇ, ಜೂನ್ ಮಳೆಯಲ್ಲಿ ಸೊಳ್ಳೆಯಿಂದ ಚಿಕನ್ ಗುನ್ಯಾ, ಡೆಂಘಿ ಬರುವ ಸಾಧ್ಯತೆಗಳು ಹೆಚ್ಚು, ಹಾಗಾಗಿ ಬಳಸುವ ನೀರು, ಕುಡಿಯುವ ನೀರು ಬಹಳ ದಿನ ಸಂಗ್ರಹಿಸಬಾರದು. ಬಾವಲಿಯಿಂದ, ಹಂದಿಗಳಿಗೆ, ನಂತರ ಜನರಿಗೆ ಬರುತ್ತದೆ. ಬಾವಲಿ ತಿಂದ ಹಣ್ಣು ಮಕ್ಕಳು ತಿನ್ನದಂತೆ ಎಚ್ಚರ ವಹಿಸಬೇಕು, ಡ್ಯಾಮೇಜ್ ಹಣ್ಣು ತಿನ್ನಬೇಡಿ, ಕೇರಳ ಕಡೆ ಹೋಗೋರು ಎಚ್ಚರ ವಹಿಸಿ, ಪಿಗ್ ಫಾರ್ಮ್ ಎಚ್ಚರವಹಿಸುವಂತೆ ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bengaluru nipah virus ಪಿಗ್ ಫಾರ್ಮ್ ಡ್ಯಾಮೇಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ